ಕೊಲಂಬೊ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆ ಸೆಪ್ಟೆಂಬರ್ ತಿಂಗಳಿನಲ್ಲಿ ಭರ್ತಿಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
``ಭಾರತ ತಂಡಕ್ಕೆ ಪೂರ್ಣ ಪ್ರಮಾಣದ ಕೋಚ್ ಒಬ್ಬರನ್ನು ನಿಯುಕ್ತಿಗೊಳಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ.
ಮುಂದಿನ ತಿಂಗಳು ಸುದೀರ್ಘ ಪ್ರವಾಸಕ್ಕೆ ಆಗಮಿಸುತ್ತಿರುವ ದ.ಆಫ್ರಿಕಾ ವಿರುದ್ಧದ ಮಹತ್ವದ ಸರಣಿಯ ಹೊತ್ತಿಗೆ ಟೀಂ ಇಂಡಿಯಾ ಅಧಿಕೃತ ಕೋಚ್ ಒಬ್ಬರನ್ನು ಒಳಗೊಳ್ಳಲಿದೆ. ಎಂದು ಠಾಕೂರ್ ತಿಳಿಸಿದ್ದಾರೆ.