ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕರ್ನಾಟಕದ ಡಿಸ್ತಕ್ ರ್ಥೋಪಟು ವಿಕಾಸ್ ಗೌಡ (ಸಂಗ್ರಹ ಚಿತ್ರ) 
ಕ್ರೀಡೆ

ಸೈನಾ, ವಿಕಾಸ್ ಗೆ ಹಣ ಬಿಡುಗಡೆ

ಮುಂದಿನ ಒಲಂಪಿಕ್ಸ್ ಸಿದ್ದತೆಗಾಗಿ ಟಾರ್ಗೆಟ್ ಒಲಂಪಿಕ್ಸ್ ಪೋಡಿಯಮ್ (ಟಾಪ್) ಯೋಜನೆಯ ಮೂಲಕ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕರ್ನಾಟಕದ ಡಿಸ್ತಕ್ ರ್ಥೋಪಟು ವಿಕಾಸ್ ಗೌಡ ಅವರ ತರಬೇತಿಗಾಗಿ ಕೇಂದ್ರ ಸರ್ಕಾರ ಶುಕ್ರವಾರ ಹಣ ಬಿಡುಗಡೆ ಮಾಡಿದೆ...

ನವದೆಹಲಿ: ಮುಂದಿನ ಒಲಂಪಿಕ್ಸ್ ಸಿದ್ದತೆಗಾಗಿ ಟಾರ್ಗೆಟ್ ಒಲಂಪಿಕ್ಸ್ ಪೋಡಿಯಮ್ (ಟಾಪ್) ಯೋಜನೆಯ ಮೂಲಕ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಕರ್ನಾಟಕದ ಡಿಸ್ತಕ್ ರ್ಥೋಪಟು ವಿಕಾಸ್ ಗೌಡ ಅವರ ತರಬೇತಿಗಾಗಿ ಕೇಂದ್ರ ಸರ್ಕಾರ ಶುಕ್ರವಾರ ಹಣ ಬಿಡುಗಡೆ ಮಾಡಿದೆ.

ಅಗತ್ಯ ಕೋಚ್ ನೇಮಕ ಮತ್ತು ತರಬೇತಿಗಾಗಿ ತಗಲುವ ವೆಚ್ಚಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆ. ಕಳೆದ ಜೂನ್ ನಿಂದ ಒಲಂಪಿಕ್ಸ್ ಕ್ರೀಡಾಕೂಟದವರೆಗೂ ವಿಮಲ್ ಕುಮಾರ್ ಅವರನ್ನು ವೈಯಕ್ತಿಕ ಕೋಟ್ ಆಗಿ ನೇಮಿಸಿಕೊಂಡಿರುವ ಸೈನಾ ಅವರಿಗೆ ರು.10.81 ಲಕ್ಷ ಹಣ ನೀಡಲಾಗಿದೆ.

ಸೈನಾ ನೆಹ್ವಾಲ್ ಅವರು ವಿಮಲ್ ಕುಮಾರ್ ಅವರನ್ನು ಕೋಚ್ ಆಗಿ ನೇಮಕವಾಗಿರುವುದರಿಂದ ಅವರಿಗೆ ತಿಂಗಳಿಗೆ ರು.1 ಲಕ್ಷ ವೇತನ ಹಾಗೂ ಇತರೆ ಜಿಮ್ ಸಲಕರಣೆಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಲಾಗಿದೆ ಎಂದು ಕ್ರೀಡಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಕಾಸ್ ಗೌಡ ಅವರಿಗೆ ಹಣ ನೀಡಲಾಗಿದ್ದು, 2014ರ ಡಿಸೆಂಬರ್ ನಿಂದ ಆಗಸ್ಟ್ 2015 ಮತ್ತು ನವೆಂಬರ್ 2015 ಆಗಸ್ಟ್ 2016ರವರೆಗೆ ಒಟ್ಟು 19 ತಿಂಗಳ ತರಬೇತಿಗಾಗಿ ಒಟ್ಟು ರು.1.12 ಕೋಟಿ ಹಣವನ್ನು ನೀಡಲು ನಿರ್ಧರಿಸಿತ್ತು. ಈ ಪೈಕಿ ಈವರೆಗೂ ಅಗತ್ಯವಾಗಿದ್ದ ಮೊತ್ತವನ್ನು ಸಚಿವಾಲಯ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?