ನ್ಯೂಯಾರ್ಕ್ ನಲ್ಲಿ ಆಗಸ್ಟ್ 24ರಂದು ನಡೆದ ಸ್ಟ್ರೀಟ್ ಟೆನಿಸ್ ನಲ್ಲಿ ರಫೆಲ್ ನಡಾಲ್, ಸೆರೆನಾ ವಿಲಿಯಮ್ಸ್, ಮ್ಯಾಡಿಸನ್ ಕೀಸ್, ನಿಕ್ ಕಿರ್ಗೋಯಿಸ್, ಮಾರಿಯಾ ಶರಾಪೋವಾ, ಪೀಟ್ ಸ್ಯ 
ಕ್ರೀಡೆ

ಸ್ಟ್ರೀಟ್ ಟೆನಿಸ್ ಆಟದ ಮೋಜು

ಟೆನಿಸ್ ಲೋಕದ ಎಲ್ಲಾ ದಿಗ್ಗಜರೂ ರಸ್ತೆಯೊಂದರಲ್ಲಿ ಸಾರ್ವಜನಿಕರಿಗೆ ಒಟ್ಟಿಗೇ ಕಾಣಿಸಿಕೊಂಡರೆ ಹೇಗಿರುತ್ತೆ? ಮಲ್ಟಿಸ್ಟಾರ್ ಗಳ ಸಿನಿಮಾ ಇದ್ದಂತೆ ಇರುತ್ತೆ ಅಲ್ವಾ. ಆದರೆ, ಇದನ್ನು ಸಾಧ್ಯವಾಗಿಸಿದೆ ಖ್ಯಾತ ಕ್ರೀಡಾ ಸಾಮಗ್ರಿ ತಯಾರಿಕಾ ಸಂಸ್ಥೆ ನೈಕ್...

ನ್ಯೂಯಾರ್ಕ್: ಟೆನಿಸ್ ಲೋಕದ ಎಲ್ಲಾ ದಿಗ್ಗಜರೂ ರಸ್ತೆಯೊಂದರಲ್ಲಿ ಸಾರ್ವಜನಿಕರಿಗೆ ಒಟ್ಟಿಗೇ ಕಾಣಿಸಿಕೊಂಡರೆ ಹೇಗಿರುತ್ತೆ? ಮಲ್ಟಿಸ್ಟಾರ್ ಗಳ ಸಿನಿಮಾ ಇದ್ದಂತೆ ಇರುತ್ತೆ ಅಲ್ವಾ. ಆದರೆ, ಇದನ್ನು ಸಾಧ್ಯವಾಗಿಸಿದೆ ಖ್ಯಾತ ಕ್ರೀಡಾ ಸಾಮಗ್ರಿ ತಯಾರಿಕಾ ಸಂಸ್ಥೆ ನೈಕ್.

ಆಗಸ್ಟ್ 31ರಿಂದ ಆರಂಭಗೊಳ್ಳಲಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಗಾಗಿ ನ್ಯೂಯಾರ್ಕ್ ಗೆ ಆಗಮಿಸಿರುವ ಎಲ್ಲಾ ಖ್ಯಾತ ದಿಗ್ಗಜರಿಂದ ಅಲ್ಲಿನ ಬೀದಿಯೊಂದರಲ್ಲಿ ಟೆನಿಸ್ ಆಡಿಸಿದೆ.

ಟೆನಿಸ್ ಕ್ರೀಡೆಯ ಜಾಗೃತಿಗಾಗಿ ತಾನು ಆರಂಭಿಸಿರುವ ಸ್ಟ್ರೀಟ್ ಟೆನಿಸ್ ಅಭಿಯಾನದ ಅಂಗವಾಗಿ ನಡೆದ ಈ ಪ್ರದರ್ಶನದಲ್ಲಿ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, ಮರಿಯಾ ಶರಪೋವಾ, ರೋಜರ್ ಫೆಡರರ್, ರಾಫೆಲ್ ನಡಾಲ್, ಯೂಜಿನಿ ಬುಚರ್ಡ್, ಮ್ಯಾಡಿಸನ್ ಕೀಸ್ ಹಾಗೂ ನಿಕ್ ಕಿಗ್ರಿಯೋಸ್ ಇದರಲ್ಲಿ ಭಾಗವಹಿಸಿದ್ದರು. ಇಷ್ಟು ಸಾಲದೆಂಬಂತೆ, ಈ ಆಟಗಾರರನ್ನು ಹುರಿದುಂಬಿಸಲು ಟೆನಿಸ್ ಲೋಕದ ದಂತಕತೆ ಎಂದೇ ಖ್ಯಾತರಾಗಿರುವ ಪೀಟ್ ಸಾಂಪ್ರಾಸ್, ಆ್ಯಂಡ್ರೆ ಅಗಾಸ್ಸಿ ಹಾಗೂ ಜಾನ್ ಮೆಕೆನ್ರೊ ಸಹ ಹಾಜರಿದ್ದರು. ಈ ಎಲ್ಲರೂ ಒಂದೇ ಫೋಟೋಕ್ಕೆ ಫೋಸು ನೀಡಿ ನೆರೆದಿದ್ದವರಲ್ಲಿ ರೋಮಾಂಚನ ತಂದರು.

1990ರಲ್ಲೂ ನೈಕ್ ಸಂಸ್ಥೆ, ಟೆನಿಸ್ ಆಟಗಾರರನ್ನಿಟ್ಟುಕೊಂಡು ಇಂಥದ್ದೊಂದು ಜಾಹೀರಾತು ತಯಾರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

SCROLL FOR NEXT