ಟಾಪ್ 10 ಪಟ್ಟಿಯಿಂದ ಕೊಹ್ಲಿ ಹೆಸರು ಹೊರಕ್ಕೆ
ಟೆಸ್ಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರು ಐಸಿಸಿ ಪ್ರಕಟಿಸಿರುವ ಟಾಪ್ 10 ರ್ಯಾಕಿಂಗ್ ಪಟ್ಟಿಯಿಂದ ಹೊರ...
ದುಬೈ: ಟೆಸ್ಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರು ಐಸಿಸಿ ಪ್ರಕಟಿಸಿರುವ ಟಾಪ್ 10 ರ್ಯಾಕಿಂಗ್ ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಐಸಿಸಿ ಪ್ರಕಟಿಸಿರುವ ಟಾಪ್ 10 ರ್ಯಾಕಿಂಗ್ ಪಟ್ಟಿಯಿಂದ ಐಸಿಸಿ ಟೆಸ್ಟ್ ಬ್ಯಾಟಿಂಗ್ ಅಗ್ರ ಹತ್ತು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಐಸಿಸಿ ಟೆಸ್ಟ್ ಬ್ಯಾಟಿಂಗ್ ಅಗ್ರ ಹತ್ತು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಿಂದ ಕೊಹ್ಲಿ ಕೆಳಕ್ಕೆ ಕುಸಿದಿದ್ದಾರೆ.
ಆದರೆ ಬೌಲಿಂಗ್ ವಿಭಾಗದಲ್ಲಿ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರು ಮೊದಲ ಹತ್ತರೊಳಗೆ (8) ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಎರಡು ಪಂದ್ಯಗಳಲ್ಲಿ 17 ವಿಕೆಟ್ ಪಡೆದಿರುವ ಆರ್. ಅಶ್ವಿನ್ ಬೌಲಿಂಗ್ ವಿಭಾಗದಲ್ಲಿ 8ನೇ ಸ್ಥಾನ ಗಳಿಸಿದ್ದಾರೆ. ಮತ್ತೊಬ್ಬ ಬೌಲರ್ ಅಮಿತ್ ಮಿಶ್ರ 39ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ತಂಡದ ರ್ಯಾಂಕಿಗ್ ಪಟ್ಟಿಯಲ್ಲಿ ಭಾರತ ಸದ್ಯ 6ನೇ ಸ್ಥಾನದಲ್ಲಿದೆ. ಭಾರತದ ಮತ್ತೊಬ್ಬ ಆಟಗಾರ ಅಜಿಂಕ್ಯ ರೆಹಾನೆ 20ನೇ ಸ್ಥಾನದಲ್ಲಿ ಹಾಗೂ ಕೆ. ಎಲ್. ರಾಹುಲ್ ಅವರು 87ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆಟಗಾರ ಸ್ಟೀವನ್ ಸ್ಮಿತ್, ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಹಾಗೂ ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ ಇದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಶ್ರೀಲಂಕಾದ ಕುಮಾರ ಸಂಗಕ್ಕಾರ 7 ನೇ ಸ್ಥಾನದಲ್ಲಿದ್ದಾರೆ.