ಬೀಜಿಂಗ್ : ರಾಷ್ಟ್ರೀಯ ದಾಖಲೆ ಹೊಂದಿರುವ ಕುಶ್ಬೀರ್ ಕೌರ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ನಿರಾಸೆ ಮೂಡಿಸಿದ್ದಾರೆ. ಕ್ರೀಡಾಕೂಟದ 7ನೇ ದಿನವಾದ ಶುಕ್ರವಾರ ನಡೆದ ಮಹಿಳೆಯರ 20 ಕಿ.ಮೀ ರೇಸ್ ವಾಕ್‍ನಲ್ಲಿ ಭಾರತದ ಪ್ರಮುಖ ಸ್ಪರ್ಧಿ ಕುಶ್ಬೀರ್ ಕೌರ್, 37ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು.
ಇನ್ನು ಮತ್ತೊರ್ವ ಸ್ಪರ್ಧಿ ಸಪ್ನಾ ಅನರ್ಹಗೊಂಡು ಹೊರಗುಳಿದರು. ಮುಂದಿನ ವರ್ಷ ನಡೆಯಲಿರುವ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕುಶ್ಬೀರ್ ಈಗಾಗಲೇ ಅರ್ಹತೆ ಪಡೆದುಕೊಂಡಿದ್ದಾರೆ. 1:38:53 ಗಂಟೆಗಳಲ್ಲಿ ರೇಸ್ ಮುಕ್ತಾಯಗೊಳಿಸಿ ದ ಕುಶ್ಬೀರ್ 37ನೇ ಸ್ಥಾನ ಪಡೆದರು. ತಮ್ಮ ವೃತ್ತಿ ಜೀವನದಲ್ಲಿ ಶ್ರೇಷ್ಠ ಸಾಧನೆಗಿಂತ ಕುಶ್ಬೀರ್ ಈ ಬಾರಿ 7 ನಿಮಿಷಗಳ ಕಾಲ ನಿಧಾನವಾಗಿ ರೇಸ್ ತೀವ್ರ ಹಿನ್ನಡೆಗೆ ಕಾರಣವಾಯಿತು. ಈ ಸ್ಪರ್ಧೆ
ಯಲ್ಲಿ 49 ಸ್ಪರ್ಧಿಗಳು ಭಾಗವಹಿಸಿದ್ದು, ಆ ಪೈಕಿ 42 ಸ್ಪರ್ಧಿಗಳು ರೇಸ್ ಮುಕ್ತಾಯಗೊಳಿಸಿದರು.
22 ವರ್ಷದ ಅಮೃತಸರ ಮೂಲಕ ಕುಶ್ಬೀರ್, ಕಳೆದ ವರ್ಷ ಇಂಚಾನ್ ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಕಳೆದ ಬಾರಿಯ ಮಾಸ್ಕೊದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಕುಶ್ಬೀರ್ 39ನೇ ಸ್ಥಾನ ಪಡೆದಿದ್ದಾರೆ. ಇನ್ನು ಭಾರತದ ಮತ್ತೋರ್ವ ಸ್ಪರ್ಧಿ ಸಪ್ನಾ ರೇಸ್ ಪೂರ್ಣಗೊಳಿಸುವಲ್ಲಿ ವಿಫಲವಾದರು. ಚೀನಾಗೆ ಮೊದಲ ಚಿನ್ನ
ಮಹಿಳೆಯರ 20 ಕಿ.ಮೀ ವಾಕ್‍ನಲ್ಲಿ ವಿಶ್ವ ದಾಖಲೆ ಹೊಂದಿರುವ ಚೀನಾದ ಲಿ ಹಾಂಗ್
ಅಗ್ರ ಸ್ಥಾನ ಪಡೆದು ಸ್ವರ್ಣ ಪದಕ ಬಾಚಿಕೊಂಡರು. ಈ ಮೂಲಕ ಆತಿಥೇಯ ಚೀನಾ ಕ್ರೀಡಾಕೂಟದ 7ನೇ ದಿನ ಮೊದಲ ಚಿನ್ನ ಸಂಪಾದಿಸಿದಂತಾಗಿದೆ.
ಲಿ ಹಾಂಗ್ 1:27:45 ಗಂಟೆಯಲ್ಲಿ ರೇಸ್ ಮುಕ್ತಾಯಗೊಳಿಸಿದರು. ಆ ಮೂಲಕ ತಮ್ಮ ದಾಖಲೆಯ ಸಮಯ 1:24:38ಕ್ಕಿಂತ 3 ನಿಮಿಷ ತಡವಾಗಿ ರೇಸ್ ಮುಗಿಸಿದರು. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಚೀನಾಗೆ ಮೊದಲ ಚಿನ್ನ ತಂದುಕೊಟ್ಟ ಕ್ರೀಡಾಪಟುವಾಗಿದ್ದಾರೆ. ಹಾಂಗ್ ತಮ್ಮ ಪ್ರತಿಸ್ಪರ್ಧಿ ಮಾಜಿ ಏಷ್ಯಾದ ದಾಖಲೆ ಹೊಂದಿದ್ದ ಆಟಗಾರ್ತಿ ಲು ಕ್ಸುಝಿ ಅವರನ್ನು 0.26 ಸೆಕೆಂಡ್ ಗಳ ಅಂತರದಲ್ಲಿ ಹಿಂದಿಕ್ಕುವ ಮೂಲಕ ಅಗ್ರಸ್ಥಾನ ಪಡೆದರು. ಆ ಮೂಲಕ ಲು ಕ್ಸುಝಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಉಕ್ರೇನ್‍ನ ಲ್ಯೂಂಡ್ಮಿಲಾ ಒಲ್ಯನೊವ್ ಸ್ಕ 1:28:13 ಗಂಟೆಗಳಲ್ಲಿ ರೇಸ್ ಪೂರ್ಣಗೊಳಿಸಿ ಕಂಚಿನ ಪದಕ ಪಡೆದರು.
ಭಾರತಕ್ಕೆ ನಿರಾಸೆ, ವಿಕಾಸ್ ಮೇಲೆ ನಿರೀಕ್ಷೆ: ಚಾಂಪಿಯನ್ ಶಿಪ್ ಆರಂಭವಾಗಿ 7 ದಿನಗಳು ನಡೆದರೂ ಈವರೆಗೆ ಭಾರತ ಕ್ರೀಡಾಪಟುಗಳು ಯಾವುದೇ ಪದಕವನ್ನು ಸಂಪಾದಿಸುವಲ್ಲಿ ಸಾಧ್ಯವಾಗಿಲ್ಲದಿರುವುದು ನಿರಾಸೆ ಮೂಡಿಸಿದೆ.
ಭಾರತದ ಪರ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಲಲಿತಾ ಬಬರ್ ಉತ್ತಮ ಪ್ರದರ್ಶನ ನೀಡಿ 8ನೇ ಸ್ಥಾನ ಗಳಿಸಿದ್ದು ಹೊರತುಪಡಿಸಿ, ಉಳಿದ ಯಾವುದೇ ಸ್ಪರ್ಧಿಗಳು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಶನಿವಾರ ನಡೆಯಲಿರುವ ಡಿಸ್ಕಸ್ ತ್ರೋ ವಿಭಾಗದ ಫೈನಲ್ ಸುತ್ತಿನಲ್ಲಿ ಬೆಂಗಳೂರಿನ ವಿಕಾಸ್ ಗೌಡ ಮೇಲೆ ನಿರೀಕ್ಷೆ ಹೊಂದಲಾಗಿದೆ. ಶನಿವಾರ ಪುರುಷರ 50 ಕಿ.
ಮೀ. ರೇಸ್ ವಾಕ್‍ನಲ್ಲಿ ಸಂದೀಪ್ ಕುಮಾರ್ ಮತ್ತು ಮನೀಶ್ ಸಿಂಗ್ ರಾವತ್ ಕಣಕ್ಕಿಳಿಯ
ಲಿದ್ದಾರೆ.ಮಹಿಳೆಯರ 4/400 ರಿಲೇ ಹೀಟ್ಸ್ ನಲ್ಲಿ ಭಾರತದ ಮಹಿಳಾ ತಂಡ ಪಾಲ್ಗೊಳ್ಳಲಿದೆ. ಅಂತಿಮ ದಿನವಾದ ಭಾನುವಾರ ಮಹಿಳೆಯರ ಮಹಿಳೆಯರ ಮ್ಯಾರಥಾನ್ ರೇಸ್‍ನಲ್ಲಿ ಲಲಿತಾ, ಒ.ಪಿ ಜೈಶಾ ಮತ್ತು ಸುಧಾ ಸಿಂಗ್ ಓಡಲಿದ್ದಾರೆ.