ಉಸೇನ್ ಬೋಲ್ಟ್ 
ಕ್ರೀಡೆ

ಹ್ಯಾಟ್ರಿಕ್ ಚಿನ್ನ ಬಾಚಿದ ಉಸೇನ್ ಬೋಲ್ಟ್

ವಿಶ್ವ ಸ್ಪ್ರಿಂಟ್ ಲೋಕದಲ್ಲಿ ಜಮೈಕಾ ಅಥ್ಲೀಟ್‍ಗಳು ತನ್ನ ಪಾರುಪತ್ಯವನ್ನು ಮೆರೆದಿದ್ದಾರೆ. ಅದರಲ್ಲೂ ವೇಗದ ಓಟಗಾರ...

ಬೀಜಿಂಗ್: ವಿಶ್ವ ಸ್ಪ್ರಿಂಟ್ ಲೋಕದಲ್ಲಿ ಜಮೈಕಾ ಅಥ್ಲೀಟ್‍ಗಳು ತನ್ನ ಪಾರುಪತ್ಯವನ್ನು ಮೆರೆದಿದ್ದಾರೆ. ಅದರಲ್ಲೂ ವೇಗದ ಓಟಗಾರ ಎಂದೇ ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಹ್ಯಾಟ್ರಿಕ್ ಸ್ವರ್ಣ ಬಾಚುವ ಮೂಲಕ ತನ್ನ ಪರಾಕ್ರಮವನ್ನು ಮುಂದುವರಿಸಿದ್ದಾರೆ.

ಶನಿವಾರ ಇಲ್ಲಿನ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ಪುರುಷರ 4ಘಿ100 ಮೀ. ರಿಲೇ ಓಟದಲ್ಲಿ ಜಮೈಕಾ ತಂಡ ಮಿಂಚಿನ ಪ್ರದರ್ಶನ ತೋರಿತು. 37.36 ಸೆಕೆಂಡ್‍ಗಳಲ್ಲಿ ರೇಸ್ ಪೂರ್ಣಗೊಳಿಸಿದ ಡಮೈಕಾ ಓಟಾಗರರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇನ್ನು ಅಮೆರಿಕ ಎರಡನೇ ಸ್ಥಾನ ಪಡೆದಿತ್ತಾದರೂ ಓಟದ ವೇಳೆ ಫೆಲ್ ಆದ ಪರಿಣಾಮ ಅನರ್ಹಗೊಂಡು ಪದಕ ವಂಚಿತವಾಯಿತು.

ಜಮೈಕಾ ತಂಡದ ಪರ ನೆಸ್ಟ ಕಾರ್ಟರ್, ಅಸಾಫ ಪೊವೆಲ್, ನಿಕೆಲ್ ಅಶೆಮಡೆ ಮತ್ತು ಉಸೇನ್ ಬೋಲ್ಟ್ ಕ್ರಮವಾಗಿ ನಾಲ್ಕು ಕ್ರಮಾಂಕದಲ್ಲಿ ಓಡಿದರು. ಅರ್ಧ ಭಾಗದಲ್ಲಿ ಅಮೆರಿಕ ಖ್ಯಾತ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಅವರ ಉತ್ತಮ ಪ್ರದರ್ಶನದೊಂದಿಗೆ ಮುನ್ನಡೆಯಲ್ಲಿತ್ತು. ಅಮೆರಿಕ ಪರ ಮೂರನೇ ಕ್ರಮಾಂಕದಲ್ಲಿ ಓಡಿದ ಟೈಸನ್ ಗೇ, ತಮ್ಮ ಓಟ ಮುಗಿಸಿ ಅಂತಿಮ ಕ್ರಮಾಂಕದಲ್ಲಿದ್ದ ಮೈಕ್ ರೋಡ್‍ಗರ್ಸ್‍ಗೆ ಪಾಸ್ ನೀಡುವಾಗ ಫೇಲ್ ಮಾಡಿದರು.

ಈ ವೇಳೆ ಅಂತಿಮ ಕ್ರಮಾಂಕದಲ್ಲಿ ಬೋಲ್ಟ್ ಅತ್ಯುತ್ತಮ ಪ್ರದರ್ಶನದೊಂದಿಗೆ ಮುನ್ನಡೆ ಪಡೆದುಕೊಂಡರು. ಅಮೆರಿಕ ಅನರ್ಹಗೊಂಡ ಹಿನ್ನೆಲೆಯಲ್ಲಿ ಆತಿಥೇಯ ಚೀನಾ (38.01 ಸೆ.) ಹಾಗೂ ಕೆನಡಾ (38.13 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆಯಿತು. ಮಿಂಚು ಹರಿಸಿದ ಮಹಿಳೆಯರು ಮಹಿಳೆಯರ 4ಘಿ100 ಮೀ. ರಿಲೇನಲ್ಲಿ ಜಮೈಕಾ ಓಟಗಾರ್ತಿಯರು ಮಿಂಚಿನ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್‍ಶಿಪ್ ದಾಖಲೆ ನಿರ್ಮಿಸಿದರು.

ಅಲ್ಲದೆ ಅಮೆರಿಕ ತಂಡವನ್ನು ಹಿಂದಿಕ್ಕಿ ಸ್ವರ್ಣ ಪದಕ ಬಾಚಿಕೊಂಡರು. ಅಂತಿಮ ಸುತ್ತಿನಲ್ಲಿ ಜಮೈಕಾ ತಂಡ 41.07 ಸೆ.ಗಳಲ್ಲಿ ರೇಸ್ ಪೂರ್ಣಗೊಳಿಸುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದರು. ಜಮೈಕಾ ತಂಡದ ಪರ ಕಣಕ್ಕಿಳಿದಿದ್ದ ವೆರೊನಿಕಾ ಕ್ಯಾಂಬೆಲ್ ಬ್ರೌನ್, ನಟಾಶ ಮೊರಿಸನ್, ಎಲೈನ್ ಥಾಪ್ಸನ್ ಮತ್ತು ಶೆಲ್ಲಿ ಅನ್ ಪ್ರೋಸರ್ ಪ್ರೈಸ್ ಅತ್ಯುತ್ತಮ ಪ್ರದರ್ಶನ ನೀಡಿದರು. ನಾಲ್ಕನೇ ಕ್ರಮಾಂಕದಲ್ಲಿ ಓಡಿದ ಶೆಲ್ಲಿ ಎಮೆರಿಕಾದ ತಂಡವನ್ನು ಸಂಪೂರ್ಣವಾಗಿ ಹಿಂದಿಕ್ಕುವಲ್ಲಿ ಯಶಸ್ವಿಯಾದರು.

ಇನ್ನು ಎರಡನೇ ಸ್ಥಾನದಲ್ಲಿ ಅಮೆರಿಕಾದ 41.68 ಸೆ.ಗಳಲ್ಲಿ ರೇಸ್ ಈ ಮೂಲಕ 0.61 ಸೆ.ಗಳ ಅಂತರದಲ್ಲಿ ಚಿನ್ನದ ಪದಕ ವಂಚಿತವಾಯಿತು. 42.03 ಸೆಕೆಂಡ್‍ಗಳಲ್ಲಿ ಓಡಿದ ಟ್ರಿನಿಡಾಡ್ ಮತ್ತು ಬೇಗೊ ತಂಡ ಮೂರನೇ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT