ಡೈನಮೋಸ್ ತಂಡಕ್ಕೆ ಅದಿಲ್ ನಬಿ
ಇಂಡಿಯನ್ ಸೂಪರ್ ಲೀಗ್ನ ತಂಡವಾದ ಡೆಲ್ಲಿ ಡೈನಮೋಸ್ ಇಂಗ್ಲೀಷ್ ಪ್ರಿಮಿಯರ್ ಲೀಗ್ನ ವೆಸ್ಟ್ ಬ್ರೊಮ್ ವಿಚ್ ಅಲ್ಬಿಯೊನ್ ತಂಡದ...
ನವದೆಹಲಿ: ಇಂಡಿಯನ್ ಸೂಪರ್ ಲೀಗ್ನ ತಂಡವಾದ ಡೆಲ್ಲಿ ಡೈನಮೋಸ್ ಇಂಗ್ಲೀಷ್ ಪ್ರಿಮಿಯರ್ ಲೀಗ್ನ ವೆಸ್ಟ್ ಬ್ರೊಮ್ ವಿಚ್ ಅಲ್ಬಿಯೊನ್ ತಂಡದ ಯುವ ಆಟಗಾರ ಅದಿಲ್ ನಬಿ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಅಕ್ಟೋಬರ್ನಲ್ಲಿ ಆರಂಭವಾಗಲಿರುವ ಟೂರ್ನಿಯಲ್ಲಿ ಎರಡನೇ ಆವೃತ್ತಿಯ ಐಎಸ್ ಎಲ್ನಲ್ಲಿ ಡೆಲ್ಲಿ ತಂಡಕ್ಕೆ ಪಾಕಿಸ್ತಾನ ಮೂಲದ ನಬಿ ಈಗ ಐಎಸ್ಎಲ್ನಲ್ಲಿ ಆಡಲಿದ್ದಾರೆ.
ಕಳೆದ ಸಾಲಿನಲ್ಲಿ 22 ಪಂದ್ಯಗಳಿಂದ ಅದಿಲ್ 12 ಗೋಲು ದಾಖಲಿಸಿದರೆ, ಆರು ಗೋಲಿಗೆ ನೆರವಾಗಿ, ಅಭಿಮಾನಿಗಳ ಮನ ಗೆದ್ದಿದ್ದರು. ಅಲ್ಲದೆ ಆ್ಯಶ್ಟನ್ ವಿಲ್ಲಾ ವಿರುದ್ಧ ಹ್ಯಾಟ್ರಿಕ್ ಗೋಲು ದಾಖಲಿಸಿದ್ದರು. ಪ್ರಸಕ್ತ ಅವಕಾಶವನ್ನು ಬಳಸುವತ್ತ ಗಮನಹರಿಸುವುದಾಗಿ ಅದಿಲ್ ತಿಳಿಸಿದ್ದಾರೆ.