ವಿಕಾಸ್ ಗೌಡ 
ಕ್ರೀಡೆ

ಭಾರತೀಯ ಅಥ್ಲೀಟ್‍ಗಳಿಗೆ ಮುಂದುವರಿದ ನಿರಾಸೆ

ಪ್ರಸಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಭಾರತದ ಅಥ್ಲೀಟ್‍ಗಳ ಪ್ರದರ್ಶನ ನೀರಸವಾಗಿದೆ. ಕ್ರೀಡಾಕೂಟದ...

ಬೀಜಿಂಗ್: ಪ್ರಸಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಭಾರತದ ಅಥ್ಲೀಟ್‍ಗಳ ಪ್ರದರ್ಶನ ನೀರಸವಾಗಿದೆ. ಕ್ರೀಡಾಕೂಟದ ಎಂಟನೇ ದಿನವೂ ಭಾರತೀಯ ಅಥ್ಲೀಟ್‍ಗಳು ನಿರಾಸೆ ಮೂಡಿಸಿದ್ದಾರೆ.

ಮಹಿಳೆಯರ 4x400 ರಿಲೆ ಹಾಗೂ 50 ಕಿ.ಮೀ ಮ್ಯಾರಥಾನ್‍ನಲ್ಲಿ ಭಾರತ ಸ್ಪರ್ಧಿಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಇನ್ನು ಡಿಸ್ಕಸ್ ಥ್ರೋನಲ್ಲೂ ಕರ್ನಾಟಕದ ತಾರಾ ಆಟಗಾರ ವಿಕಾಸ್ ಗೌಡ ಪದಕ ಪಡೆಯುವಲ್ಲಿ ವಿಫಲರಾದರು.

ಶನಿವಾರ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ವಿಕಾಸ್ ಗೌಡ 62.24 ಮೀ. ದೂರ ಎಸೆಯಲಷ್ಟೇ ಶಕ್ತರಾದ ಕಾರಣ 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇನ್ನು 4ಘಿ400 ಮೀ. ಮಹಿಳೆಯರ ರಿಲೇ ಓಟದಲ್ಲಿ ಭಾರತದ ತಂಡ (3:29.08) 2ನೇ ಹೀಟ್ಸ್‍ನಲ್ಲಿ ಎಂಟನೇ ಸ್ಥಾನ ಪಡೆದಿದ್ದು, ತೀವ್ರ ನಿರಾಸೆಗೆ ಕಾರಣವಾಗಿತ್ತು.

ಇನ್ನು 50 ಕಿ.ಮೀ ಮ್ಯಾರಥಾನ್ ರೇಸ್‍ನಲ್ಲಿ ಭಾರತದ ಸಂದೀಪ್ ಕುಮಾರ್ (3:57:03 ನಿ.) ಹಾಗೂ ಮನೀಷ್ ಸಿಂಗ್ ರಾವತ್ (3:57:11 ನಿ.) ಕ್ರಮವಾಗಿ 26 ಮತ್ತು 27ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!