3 ತಿಂಗಳ ಗರ್ಭಿಣಿ ಬಾಕ್ಸಿಂಗ್ ಆಡಿ ಚಾಂಪಿಯನ್ ಆದಳು!
ಗರ್ಭಿಣಿಯರು ತಮ್ಮ ಬಗ್ಗೆ ಎಷ್ಟು ಮುತುವರ್ಜಿ ವಹಿಸಿದ್ರೂ ಸಾಲದು. ಆದರೆ, ಇಲ್ಲೊಬ್ಬಳು ಬಾಕ್ಸಿಂಗ್ ಡಿ ಚಾಂಪಿಯನ್ ಕೂಡ ಆಗಿದ್ದಾಳೆ! ಬ್ರೆಜಿಲ್ನ ಈ ಬಾಕ್ಸಿಂಗ್ಪಟು ಹೆಸರು ಕಿಂಬರ್ಲಿ ನೋವಾಸ್...
ಗರ್ಭಿಣಿಯರು ತಮ್ಮ ಬಗ್ಗೆ ಎಷ್ಟು ಮುತುವರ್ಜಿ ವಹಿಸಿದ್ರೂ ಸಾಲದು. ಆದರೆ, ಇಲ್ಲೊಬ್ಬಳು ಬಾಕ್ಸಿಂಗ್ ಡಿ ಚಾಂಪಿಯನ್ ಕೂಡ ಆಗಿದ್ದಾಳೆ! ಬ್ರೆಜಿಲ್ನ ಈ ಬಾಕ್ಸಿಂಗ್ಪಟು ಹೆಸರು ಕಿನ್ಬರ್ಲಿ ನೋವಾಸ್.
24 ವರುಷದ ಈಕೆ ಇತ್ತೀಚೆಗೆ ನಡೆದ ಎಂಎಂಎ (ಮಿಕ್ಸ್ಡ್ ಮಾರ್ಷಿಯಲ್ ಆರ್ಟ್) ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಈ ಸಾಹಸ ಮಾಡಿದಳು. ಇದನ್ನಾಡುವಾಗ ಕಿಂಬರ್ಲಿ 3 ತಿಂಗಳ ಗರ್ಭಿಣಿ. ಈಕೆಗಿದು ಗೊತ್ತಿರಲಿಲ್ಲ. ಈ ಟೂರ್ನಿ ಆಡುವಾಗ ತಲೆ ಸುತ್ತುವಿಕೆ, ವಾಂತಿ ಬಂದಿತ್ತಂತೆ. ಪಂದ್ಯ ಮುಗಿದ ಬಳಿಕ ವೈದ್ಯರ ಬಳಿ ಹೋದಾಗ ಈ ಸಂಗತಿ ಗೊತ್ತಾಗಿ ಕಿನ್ಬರ್ಲಿ ಶಾಕ್ ಆಗಿದ್ದಾಳೆ!
ತಾನಾಡಿದ ಮಾ್ಯಚುಗಳ ರಿಲೇ ನೋಡಿದಾಗ ಈಕೆಯ ಹೊಟ್ಟೆಗೆ 60ಕ್ಕೂ ಅಧಿಕ ಪೆಟ್ಟುಗಳು ಬಿದ್ದಿವೆ. ಸಾಲದ್ದಕ್ಕೆ ಟ್ರೆಡ್ಮಿಲ್ನಲ್ಲಿ ಸುಸ್ತಾಗೋ ತನಕ ಓಡಿದ್ದಾಳೆ. ಆದರೂ, ಮಗುವಿಗೇನೂ ಆಗಿಲ್ಲ. ಈಗಿವಳು 6 ತಿಂಗಳ ಗರ್ಭಿಣಿ. ಟ್ವೀಟರ್ನಲ್ಲಿ ಈಗ 3 ತಿಂಗಳ ಹಿಂದಿನ ತನ್ನ ಕಥೆಯನ್ನು ಕಿಂಬರ್ಲಿ ಹಾಕ್ಕೊಂಡು, ಅಭಿಮಾನಿಗಳ ಎದೆಯನ್ನೂ ನಡುಗಿಸಿದ್ದಾಳೆ. ನಿಜಕ್ಕೂ ಈಕೆ ಮಹಾತಾಯಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.