ಕ್ರೀಡೆ

ನನ್ನನ್ನು ಕಡೆಗಣಿಸದಿರಿ: ಬೋಲ್ಟ್ ಗುಡುಗು

Srinivasamurthy VN

ಬೀಜಿಂಗ್: `ನನ್ನ ಪ್ರತಿಭೆಯನ್ನು ಕಡೆಗಾಣಿಸದಿರಿ, ನನ್ನನ್ನು ನಿರ್ಲಕ್ಷಿಸದಿರಿ' - ಇದು ವಿಶ್ವ ಅಥ್ಲೆಟಿಕ್ಸ್ ಲೋಕಕ್ಕೆ ಶರವೇಗದ ಸರದಾರ ಉಸೇನ್ ಬೋಲ್ಟ್ ನೀಡಿದ ಸಂದೇಶ.

ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಒಂದರ ಹಿಂದೊಂದರಂತೆ ಮೂರು ಚಿನ್ನದ ಪದಕ ತನ್ನದಾಗಿಸಿಕೊಂಡ ಜಮೈಕಾದ ಈ ಮಿಂಚಿನ ಓಟಗಾರನ ಆತ್ಮವಿಶ್ವಾಸದ ಮಾತುಗಳಿವು. 2009ರ  ಬರ್ಲಿನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಹಾಗೂ 2013ರಲ್ಲಿ ಮಾಸ್ಕೊ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನಲ್ಲಿ ಕ್ರಮವಾಗಿ 100 ಮೀ. ಹಾಗೂ 200 ಮೀ. ಓಟದಲ್ಲಿ ಚಿನ್ನದ ಗೌರವ  ಪಡೆದಿದ್ದ ಬೋಲ್ಟ್, 2011ನಲ್ಲಿ ಡೇಗುವಿನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ನಲ್ಲಿ 100 ಮೀ.ನಲ್ಲಿ ಚಿನ್ನ ಸಂಪಾದಿಸುವಲ್ಲಿ ಸಫಲರಾಗಿರಲಿಲ್ಲ.

ಆದರೆ, 200 ಮೀ. ಹಾಗೂ ರಿಲೇ ಸ್ಪರ್ಧೆಗಳಲ್ಲಿ ಬಂಗಾರದ ಪದಕ ಗೆದ್ದಿದ್ದರು. ಇದೀಗ, ಈ ವರ್ಷದ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಅವರು ಮೂರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಒಲಿಂಪಿಕ್ಸ್  ನಲ್ಲೂ ಮಿಂಚು ಹರಿಸಿರುವ ಅವರು, 2008ರ ಬೀಜಿಂಗ್ ಒಲಿಂಪಿಕ್ಸ್ ಹಾಗೂ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಕಳೆದೊಂದು ವರ್ಷದಿಂದ ಗಾಯದ ಸಮಸ್ಯೆಗೆ ತುತ್ತಾಗಿದ್ದರೂ,  ಅದನ್ನು ಮೆಟ್ಟಿನಿಂತಿರುವ ಬೋಲ್ಟ್, ಈ ಬಾರಿಯ ವಿಶ್ವಮಟ್ಟದ ಕ್ರೀಡಾಕೂಟದಲ್ಲಿ 100 ಮೀ., 200 ಮೀ.ನಲ್ಲಿ ಚಿನ್ನದ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದಲ್ಲದೆ, 4ಗಿ 400 ಮೀ. ರಿಲೇ ಓಟದ ಸ್ಪರ್ಧೆಯಲ್ಲೂ ಬೋಲ್ಟ್ ಅವರಿದ್ದ ತಂಡ ಚಿನ್ನ ಗೆದ್ದಿದೆ. ಈ ಸಾಧನೆಯ ನಂತರ, ಕ್ರೀಡಾಕೂಟದ ಅಂತಿಮದಿನವಾದ ಭಾನುವಾರ ಮಾಧ್ಯಮಗಳ ಮುಂದೆ  ಹಾಜರಾದ ಅವರು, ಸಾಧನೆ ತಮಗೆ ತೃಪ್ತಿ ತಂದಿದೆ ಎಂದರಲ್ಲದೆ, `ನನ್ನನ್ನು ನಿರ್ಲಕ್ಷಿಸದಿರಿ, ಎಂಥಾ ಸಂದರ್ಭದಲ್ಲೂ ನಾನು ಪ್ರತಿಸ್ಪರ್ಧಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಬಲ್ಲೆ'  ಎಂದಿದ್ದಾರೆ.

SCROLL FOR NEXT