ಕಾಮನ್ವೆಲ್ತ್ ಗೆ ಮತ್ತೆ ಕ್ರಿಕೆಟ್ ಲಗ್ಗೆ?
ತೀ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕ್ರೀಡೆಯ ಮರುಸೇರ್ಪಡೆಗೆ ತೀರ್ಮಾನಿಸಲಾಗಿದ್ದು...
ಮನಿಕಟಾ (ಮಾಲ್ಟಾ): ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕ್ರೀಡೆಯ ಮರುಸೇರ್ಪಡೆಗೆ ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಯೊಂದಿಗೆ ಅಂತಾರಾಷ್ಟ್ರೀಯ ಕಾಮನ್ವೆಲ್ತ್ ಸಂಸ್ಥೆ (ಸಿಜಿಎಫ್)ಯು ಮಾತುಕತೆ ನಡೆಸುತ್ತಿದೆ. ಈ ಹಿಂದೆ, 1998ರಲ್ಲಿ ಕೌಲಾಲಂಪುರದಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸರಣಿಯನ್ನು ಮೊದಲ ಬಾರಿಗೆ ನಡೆಸಲಾಗಿತ್ತು. ಅಲ್ಲಿಂದ ಮತ್ತೆ ಅಂಥ ಪ್ರಯತ್ನವಾಗಿರಲಿಲ್ಲ. ಆದರೀಗ, ಟಿ20 ಮಾದರಿಯ ಪಂದ್ಯಗಳು ಜನಪ್ರಿಯವಾಗಿರುವ ಹಿನ್ನೆಲೆಯಲ್ಲಿ, ಕಾಮನ್ವೆಲ್ತ್‍ನಲ್ಲಿ ಚುಟುಕು ಕ್ರಿಕೆಟ್
ಸೇರಿಸುವಂತೆ ಸಿಜೆಎಫ್ ನ ಸದಸ್ಯ ರಾಷ್ಟ್ರಗಳು ಆಗ್ರಹಿಸಿವೆ.