ಜಂಟಲ್‌ಮೆನ್‌ಗಳ ಆಟ ಎಂದೇ ಕರೆಯಲ್ಪಡುವ ಕ್ರಿಕೆಟ್ ಬಗ್ಗೆ ಹೇಳುವಾಗ ಥಟ್ಟನೆ ನೆನಪಿಗೆ ಬರುವ ಹೆಸರು ಸಚಿನ್ ತೆಂಡೂಲ್ಕರ್‌ದ್ದು. ಭಾರತದಲ್ಲಿ ಕ್ರಿಕೆಟ್ ಪ್ರಮುಖ ಆಟವಾಗಿ ಬಿಂಬಿಸಲ್ಪಡುವಾಗ ಕ್ರಿಕೆಟ್ ಟೀಂ ಎಂದರೆ ಅದು ಟೀಂ ಇಂಡಿಯಾ. ಕ್ರಿಕೆಟ್ ಆಟಗಾರರೆಂದರೆ ಕಪಿಲ್ ದೇವ್, ಸಚಿನ್, ಸೆಹ್ವಾಗ್, ಧೋನಿ, ಕೊಹ್ಲಿ ಹೀಗೆ ಹೆಸರು ಹೇಳುತ್ತಾ ಹೋಗುತ್ತೇವೆ. ಅಂದರೆ ಪುರುಷರ ಕ್ರಿಕೆಟ್ ತಂಡದ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಆದರೆ ಭಾರತದಲ್ಲಿ ಮಹಿಳೆಯರ ಕ್ರಿಕೆಟ್ ತಂಡವೊಂದಿದೆ. ಅದರ ನಾಯಕಿ ಮಿಥಾಲಿ ರಾಜ್ ಎಂಬುದು ಎಷ್ಟು ಜನರಿಗೆ ಗೊತ್ತಿದೆ?
ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಮಹಿಳೆ ಈ ಮಿಥಾಲಿ ರಾಜ್. ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿರುವ ಮಿಥಾಲಿ ಹುಟ್ಟಿದ್ದು ಜೋಧಾಪುರದ ಹಳ್ಳಿಯಲ್ಲಿ. ಡಿಸೆಂಬರ್ 3ರಂದು ಅಂದರೆ ನಿನ್ನೆ ತನ್ನ 33ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಮಿಥಾಲಿ, ಮಹಿಳಾ ಕ್ರಿಕೆಟ್ ತಂಡದ ಪ್ರಧಾನ ಆಧಾರಸ್ತಂಭವಾಗಿದ್ದಾರೆ.
ತನ್ನ 19ನೇ ವಯಸ್ಸಿನಲ್ಲಿ ಟೌನ್‌ಟಾನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 214 ರನ್‌ಗಳನ್ನು ದಾಖಲಿಸಿ ಲೇಡಿ ಸಚಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ರೈಲ್ವೇಸ್ ನ್ನು ಪ್ರತಿನಿಧೀಕರಿಸುವ ಮಿಥಾಲಿ, ಏರ್ ಇಂಡಿಯಾಗಾಗಿ ಅಂಜುಂ ಚೋಪ್ರಾ ಮತ್ತು ಅಂಜು ಜೈನ್ ಜತೆ ಆಟವಾಡುತ್ತಾ ವೃತ್ತಿ ಜೀವನ ಆರಂಭಿಸಿದ್ದರು.
2005ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯವರೆಗೂ ತಂಡವನ್ನು ಕರೆದೊಯ್ದ ಕೀರ್ತಿ ಮಿಥಾಲಿಗೆ ಸಲ್ಲುತ್ತದೆ. ಇಷ್ಟೇ ಅಲ್ಲಿ 2006ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಸರಣಿ ವಿಜಯದ ರೂವಾರಿಯೂ ಈಕೆಯೇ ಆಗಿದ್ದಾರೆ.
ಬ್ಯಾಟಿಂಗ್ ಮಾತ್ರವಲ್ಲ, ಲೆಗ್‌ಬ್ರೇಕ್ ಬೌಲರ್ ಕೂಡಾ ಆಗಿರುವ ಮಿಥಾಲಿಗೆ 2003ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು.
ಏಕ ದಿನ ಪಂದ್ಯ.: 158, Runs: 5029, HS: 114*, 100s: 5, 50s: 37, Wickets: 8
ಟೆಸ್ಟ್ : 10, Runs: 663, HS: 214, 100s: 1, 50s: 4
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics