ನವದೆಹಲಿ: ರೋಚಕ ಹಣಾಹಣಿಯ ಪಂದ್ಯದ ಅಂತಿಮ ಕ್ಷಣದಲ್ಲಿ ಮೇಲುಗೈ ಸಾಧಿಸಿದ ಸಿಂಗಪುರ ಸ್ಲಾಮರ್ಸ್ ತಂಡ ಇಂಟರ್‍ನ್ಯಾಷನಲ್ ಪ್ರಿಮಿಯರ್ ಟೆನಿಸ್ ಲೀಗ್ ಟೂರ್ನಿಯಲ್ಲಿ ಫಿಲಿಪ್ಪೀನ್ಸ್ ಮ್ಯಾವೆರಿಕ್ಸ್ ವಿರುದ್ಧ ಜಯ ಸಾಧಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಸಿಂಗಪುರ ತಂಡ 26-24 ಅಂಕಗಳ ಅಂತರದಲ್ಲಿ ಫಿಲಿಪ್ಪೀನ್ಸ್ ವಿರುದ್ಧ ಜಯಿಸಿತು. ಫಿಲಿಪ್ಪೀನ್ಸ್ ಪುರುಷರ ಡಬಲ್ಸ್, ಲೆಜೆಂಡ್ಸ್ ಸಿಂಗಲ್ಸ್‍ನಲ್ಲಿ ಜಯ ಸಾಧಿಸಿತಾದರೂ, ಸಿಂಗಪುರ ಸ್ಲಾಮರ್ಸ್ ತಂಡ ಮಹಿಳೆಯರ ಸಿಂಗಲ್ಸ್, ಮಿಶ್ರ ಡಬಲ್ಸ್ ಮತ್ತು ಪುರುಷರ ಸಿಂಗಲ್ಸ್‍ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಮ್ಯಾವೆರಿಕ್ಸ್ ತಂಡದ ಪರ ಸೆರೆನಾ ವಿಲಿಯಮ್ಸ್, ಸಿಂಗಪುರದ ಕ್ಯಾರೊಲಿನಾ ಪ್ಲಿಸ್ಕೋವಾ ವಿರುದ್ಧ 4-6 ಅಂತ ರದಲ್ಲಿ ಸೋಲನುಭವಿಸಿದ್ದು ತಂಡದ ಸೋಲಿಗೆ ಕಾರಣವಾಯಿತು.
ನಿರ್ಣಾಯಕ ಪುರುಷರ ಸಿಂಗಲ್ಸ್ ನಲ್ಲಿ ನಿಕ್ ಕಿರ್ಗಿಸೊ ಮ್ಯಾವೆರಿಕ್ಸ್‍ನ ಮಿಲಾಸ್ ರೊನಿಕ್ ವಿರುದ್ಧ ರೋಚಕ ಜಯ ಸಾಧಿಸಿ ತಂಡಕ್ಕೆ ನೆರವಾದರು. ನಾನು ಐಪಿಟಿಎಲ್‍ತ್ತಮ ಸಿದ್ಧತೆ ನಡೆಸಿದ್ದೇನೆ. ಮುಂದಿನ ಪಂದ್ಯಗಳನ್ನು ಎದುರು ನೋಡುತ್ತಿದ್ದೇನೆ. ಅಲ್ಲದೆ ಟೂರ್ನಿಗಾಗಿ ಹೊಸ ಕೇಶವಿನ್ಯಾಸ ಮಾಡಿಸಿದ್ದೇನೆ ಎಂದು ರೊನಿಕ್ ತಿಳಿಸಿದರು.