ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಟೀಂ ಇಂಡಿಯಾ ಕೈವಶ
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವಿಪ್ ಮಾಡಿದೆ.
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿದೆ.
ದೆಹಲಿಯ ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 337 ರನ್ ಗಳ ಭಾರಿ ಮೊತ್ತದಿಂದ ಜಯ ಗಳಿಸಿದೆ.
ಡ್ರಾ ಮಾಡುವ ನಿಟ್ಟಿನಲ್ಲಿ ಆಫ್ರಿಕಾ ಆಟಗಾರರು ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ರವಿಚಂದ್ರನ್ ಅಶ್ವಿನ್ ಅವರ ಮಾರಣಾಂತಿಕ ದಾಳಿಗೆ ತತ್ತರಿಸಿದ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು.
ನಾಲ್ಕನೇ ದಿನದಾಟಕ್ಕೆ ಆಫ್ರಿಕಾ ತಂಡ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತ್ತು. ಇಂದು ಕಣಕ್ಕೀಳಿದ ಹಶೀಮ್ ಆಮ್ಲಾ ಮತ್ತು ನಾಯಕ ಎಬಿಡಿ ವಿಲಿಯರ್ಸ್ ಮತ್ತೆ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಅಶ್ವಿನ್ ಎಸೆತಕ್ಕೆ ವಿಲಿಯರ್ಸ್(43) ಔಟಾಗಿ ಪೆವಿಲಿಯನ್ ಸೇರಿದರೆ, ಆಲ್ಮಾ(25) ಜಡೇಜಾ ಬೌಲಿಂಗ್ ನಲ್ಲಿ ಔಲ್ಡ್ ಆದರು.
ನಂತರ ಬಂದ ಡುಪ್ಲೆಸಿಸ್ 10, ಜೆಪಿ ಡ್ಯುಮಿನಿ 0, ವಿಲಾಸ್ 13, ಅಬ್ಬೋಟ್ 0, ಡೇನ್ 1, ಮಾರ್ಕೇಲ್ 2 ರನ್ ಗಳಿಗೆ ಔಟಾದರು.
ಭಾರತ ಪರ ಆರ್. ಅಶ್ವಿನ್ 5, ಜಡೇಜಾ 2, ಯಾದವ್ 3 ವಿಕೆಟ್ ಗಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.