ಲಂಡನ್: ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಲಂಡನ್ ಚೆಸ್ ಕ್ಲಾಸಿಕ್ ಚಾಂಪಿಯನ್‍ಶಿಪ್‍ನಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿ ಮತ್ತೊಮ್ಮೆ ಡ್ರಾಗೆ ತೃಪ್ತಿಪಟ್ಟಿದ್ದಾರೆ.
ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಮವಾರ ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‍ಸನ್ ವಿರುದ್ಧ ಸೆಣಸಿದ ಆನಂದ್, ಒಂದು ಹಂತದಲ್ಲಿ ದಿಟ್ಟ ಪ್ರದರ್ಶನ ನೀಡಿದ ಹೊರತಾಗಿಯೂ ಕೇವಲ ಡ್ರಾಗಷ್ಟೇ ತೃಪ್ತರಾದರು.
300,000 ಡಾಲರ್ ಬಹುಮಾನದ ಈ ಪಂದ್ಯಾವಳಿಯಲ್ಲಿ ಇನ್ನೂ ಆರು ಸುತ್ತಿನ ಪಂದ್ಯಗಳು ನಡೆಯಬೇಕಿದ್ದು, ಹಾಲೆಂಡ್‍ನ ಅನೀಶ್ ಗಿರಿ ಮತ್ತು ಫ್ರಾನ್ಸ್ ನ ವಾಚಿಯರ್ ಲಾಗ್ರೇವ್ 2 ಪಾಯಿಂಟ್ಸ್‍ಗಳೊಂದಿಗೆ ಜಂಟಿ ಅಗ್ರ ಸ್ಥಾನದಲ್ಲಿದ್ದರೆ, ಆನಂದ್, ಕಾಲ್ರ್ ಸನ್, ಅರೋನಿಯನ್, ಆ್ಯಡಮ್ , ಗ್ರಿಸ್ಚುಕ್, ನಕಮುರಾ ಮತ್ತು ಇಟಲಿಯ ಕರೂನಾ ಮೂರು ಡ್ರಾಗಳೊಂದಿಗೆ ತಲಾ 1.5 ಅಂಕ ಗಳಿಸಿ ಸಮಬಲ ಸಾಧಿಸಿದ್ದಾರೆ.