ಢಾಕಾ: ತನ್ನ ಮನೆಯಲ್ಲಿ ಕೆಲಸಕ್ಕಿದ್ದ 11 ವರ್ಷದ ಬಾಲಕಿಯ ಮೇಲೆ ಪತ್ನಿಯೊಂದಿಗೆ ಸೇರಿ ದೈಹಿಕವಾ ಗಿ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಂಗ್ಲಾ ಕ್ರಿಕೆಟಿಗ ಶಹಾದತ್ ಹುಸೇನ್ ಗೆ ಇಲ್ಲಿನ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ.
ಮಾರ್ಚ್ 31, 2016ರವರೆಗೆ ಶಹಾದತ್‍ಗೆ ಕೋರ್ಟ್ ಜಾಮೀನು ನೀಡಿತಲ್ಲದೆ, ವೇಗಿಗೆ ಇಲ್ಲೀವರೆಗೆ ಜಾಮೀನು ನೀಡಲು ಏಕೆ ನಿರಾಕರಿಸಲಾಯಿತು ಎಂದು ಕೇಳಿದಾಗ ಮೂರು ವಾರಗಳಲ್ಲಿ ಈ ಕುರಿತು ವರದಿ ಸಲ್ಲಿಸುವುದಾಗಿ ಸರ್ಕಾರ ತಿಳಿಸಿತು. ಮನೆಗೆಲಸದ ಬಾಲಕಿಯನ್ನು ಹಿಂಸಿಸಿದ್ದರಿಂದ ಢಾಕಾ ಮೆಟ್ರೊ ಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿದ್ದರು. ಡಿ.1ರಂದು ಶಹಾದತ್ ಪತ್ನಿಗೂ ಮುಂದಿನ ಜನವರಿ 17ರವರೆಗೆ ಕೋರ್ಟ್ ಜಾಮೀನು ನೀಡಿತ್ತು.