ಫೈನಲ್ ಗೆ ಜೈನ್, ಕ್ರೈಸ್ಟ್
ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ ಬೆಂಗಳೂರು ರೋಟರಿ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಕೆಎಸ್‍ಎಫ್ಎ ಕಪ್ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಯಲ್ಲಿ ಜೈನ್ ವಿಶ್ವ ವಿದ್ಯಾಲಯ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ..
ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ ಬೆಂಗಳೂರು ರೋಟರಿ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಕೆಎಸ್‍ಎಫ್ಎ ಕಪ್ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಯಲ್ಲಿ ಜೈನ್ ವಿಶ್ವ ವಿದ್ಯಾಲಯ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ `ಬಿ' ತಂಡಗಳು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿವೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಜೈನ್ ವಿಶ್ವವಿದ್ಯಾಲಯ 1-0 ಗೋಲಿನ ಅಂತರದಲ್ಲಿ ಸಂತ ಜೋಸೆಫರ ವಾಣಿಜ್ಯಕಾಲೇಜು ತಂಡವನ್ನು ಮಣಿಸಿತು. ಜೈನ್ ವಿಶ್ವವಿದ್ಯಾಲಯದ ಪರ ನಾರಾಯಣನ್ 15ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕ್ರೈಸ್ಟ್ ಕಾಲೇಜು `ಬಿ' ತಂಡ 2-0 ಗೋಲುಗಳ ಅಂತರದಲ್ಲಿ ಆಚಾರ್ಯ ಇನ್ಸ್ ಟ್ಯೂಟ್ ತಂಡವನ್ನು ಪರಾಭವಗೊಳಿಸಿತು. ಕ್ರೈಸ್ಟ್ ಕಾಲೇಜು ತಂಡದ ಪರ ನಮನ್ 30 ಮತ್ತು ಅರ್ಜುನ್ 34ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಆ ಮೂಲಕ ಜೈನ್ ಮತ್ತು ಕ್ರೈಸ್ಟ್ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿವೆ. ಎರಡು ಉಪಾಂತ್ಯ ಪಂದ್ಯಗಳಲ್ಲಿ ಸೋತ ಸಂತ ಜೋಸೆಫರ ವಾಣಿಜ್ಯ ಕಾಲೇಜು ಮತ್ತು ಆಚಾರ್ಯ ಕಾಲೇಜು ತಂಡಗಳು ಮೂರನೇ ಸ್ಥಾನಕ್ಕಾಗಿ ಬುಧವಾರ ಸೆಣಸಲಿವೆ.