ನವದೆಹಲಿ: ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ರಕ್ಷಣಾತ್ಮಕ ಬ್ಯಾಟಿಂಗ್ ಮಾಡುವ ಮೂಲಕ ಭಾರತದ ಬೌಲರ್ ಗಳಿಗೆ ದಕ್ಷಿಣ ಆಫ್ರಿಕಾ ನೀಡಿದ ಸವಾಲನ್ನು ಭಾರತದ ಮಾಜಿ ಬೌಲರ್ ಜಾವಗಲ್ ಶ್ರೀನಾಥ್ ಶ್ಲಾಘಿಸಿದ್ದಾರೆ.
ಪ್ರವಾಸಿ ತಂಡ ಕೋಟ್ಲಾ ಟೆಸ್ಟ್ ಪಂದ್ಯದ ಕೊನೆಯ ಎರಡು ದಿನ ನೀಡಿದ ಹೋರಾಟಕ್ಕೆ ಡ್ರಾ ಫಲಿತಾಂಶ ಪಡೆಯಬೇಕಿತ್ತು ಎಂದು ತಿಳಿಸಿದ್ದಾರೆ. ದ.ಆಫ್ರಿಕಾ ತಂಡ ಅತ್ಯುತ್ತಮ ಪ್ರದರ್ಶನ ನೀಡಿತು. ಅದರಲ್ಲೂ ಹಾಶೀಂ ಆಮ್ಲಾ ಮತ್ತು ಎಬಿ ಡಿವಿಲಿಯರ್ಸ್ ಅವರ ಹೋರಾಟಕಾರಿ ಬ್ಯಾಟಿಂಗ್ ಅಂತೂ ಮೆಚ್ಚುವಂಥದ್ದು. ಈ ಬ್ಯಾಟ್ಸ್ ಮನ್ ಗಳು ತಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಪ್ರತಿ ಎಸೆತವನ್ನೂ ರಕ್ಷಣಾತ್ಮಕವಾಗಿ ಆಡಿದ್ದು, ಹೋರಾಟದ ಕೆಚ್ಚಿಗೆ ಸಾಕ್ಷಿ ಎನಿಸಿತು ಎಂದು ಶ್ರೀನಾಥ್ ಅಭಿಪ್ರಾಯಪಟ್ಟರು.