ಲಂಡನ್: ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟ ಧರಿಸಿರುವ ಭಾರತದ ವಿಶ್ವನಾಥನ್ ಆನಂದ್, ಲಂಡನ್ ಚೆಸ್ ಕ್ಲಾಸಿಕ್ ಟೂರ್ನಿಯಲ್ಲಿ ಆಘಾತಕಾರಿ ಸೋಲನುಭವಿಸಿದ್ದಾರೆ.
ಮಂಗಳವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಆನಂದ್ ತಮ್ಮ ಪ್ರತಿಸ್ಪರ್ಧಿ ಅಮೆರಿಕದ ಹಿಕಾರು ನಕಮುರಾ ಅವರ ವಿರುದ್ಧ ಪರಾಭವಗೊಂಡರು. ಆ ಮೂಲಕ ಆನಂದ್ ಕ್ಲಾಸಿಕಲ್ ಚೆಸ್ ನಲ್ಲಿ ಅಮೆರಿಕ ಆಟಗಾರನ ವಿರುದ್ಧ ಆರನೇ ಬಾರಿ ಸೋಲನುಭವಿಸಿದಂತಾಗಿದೆ. ಐದು ಸುತ್ತಿನ ಪಂದ್ಯಗಳು ಮುಕ್ತಾಯದ ನಂತರ ಆನಂದ್ 1.5 ಅಂಕಗಳನ್ನು ಸಂಪಾದಿಸಿದ್ದಾರೆ. ಟೂರ್ನಿಯಲ್ಲಿ ಇನ್ನೂ ಐದು ಸುತ್ತುಗಳು ಬಾಕಿ ಉಳಿದಿದ್ದು, ಭಾರತ ಹಿರಿಯ ಆಟಗಾರ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಈ ಜಯದೊಂದಿಗೆ ನಕಮುರಾ 2.5 ಅಂಕಗಳನ್ನು ಗಳಿಸಿ, ರಷ್ಯಾದ ಅನಿಶ್ ಗಿರಿ ಮತ್ತು ಮ್ಯಾಕ್ಸಿಮ್ವ್ಯಾಚೇರ್ ಲಾಗ್ರೇವ್ ಜತೆಗೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.
ಅನಿಶ್ ಗಿರಿ ತಮ್ಮ ಪ್ರತಿಸ್ಪರ್ಧಿ ನೆದರ್ಲೆಂಡ್ ನ ಲೆವೊನ್ ಅರೋನಿಯನ್ ವಿರುದ್ಧ ಡ್ರಾ ಸಾಧಿಸಿದರೆ, ಮ್ಯಾಕ್ಸಿಮ್ರಷ್ಯಾದ ಅಲೆಕ್ಸಾಂಡರ್ ಗ್ರಿಸ್ಕೋರ್ ವಿರುದ್ಧ ಡ್ರಾ ಫಲಿತಾಂಶಕ್ಕೆ ತೃಪ್ತರಾದರು. ಉಳಿದಂತೆ ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸನ್ ಇಂಗ್ಲೆಂಡ್ ನ ಮೈಕಲ್ ಆಡಮ್ಸ್ ವಿರುದ್ಧ ಡ್ರಾ ಸಾಧಿಸಿದರು.