ಪಂದ್ಯಾವಳಿಗೆ ವೇಳಾಪಟ್ಟಿಯನ್ನು ಮುಂಬೈನಲ್ಲಿ ಪ್ರಕಟಿಸಿದ ಬಿಸಿಸಿಐ 
ಕ್ರೀಡೆ

ಐಸಿಸಿ ಟ್ವಂಟಿ-20 ವಿಶ್ವಕಪ್: ವೇಳಾಪಟ್ಟಿ ಪ್ರಕಟ

ಭಾರತ-ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಯುವ ಯಾವುದೇ ಖಾತರಿ ಇಲ್ಲದಿದ್ದರೂ, ಮುಂದಿನ ವರ್ಷ ಆರಂಭಕ್ಕೆ...

ನವದೆಹಲಿ: ಭಾರತ-ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಯುವ ಯಾವುದೇ ಖಾತರಿ ಇಲ್ಲದಿದ್ದರೂ, ಮುಂದಿನ ವರ್ಷ ಆರಂಭಕ್ಕೆ ನಡೆಯುವ ಐಸಿಸಿ ವಿಶ್ವಕಪ್ ಟ್ವಂಟಿ-ಟ್ವಂಟಿ ಪಂದ್ಯದಲ್ಲಿ ಭಾರತ-ಪಾಕ್ ರಾಷ್ಟ್ರಗಳು ಜೊತೆಯಾಗಿ ಆಡುವುದನ್ನಂತೂ ವೀಕ್ಷಿಸುವ ಅದೃಷ್ಟ ಕ್ರಿಕೆಟ್ ಪ್ರೇಮಿಗಳಿಗಿದೆ.

ಐಸಿಸಿ ಟ್ವಂಟಿ-20 ವಿಶ್ವಕಪ್ 2016ರ ಪಂದ್ಯಕ್ಕೆ ತಂಡಗಳು ಮತ್ತು ವೇಳಾಪಟ್ಟಿಗಳನ್ನು ನಿರ್ಧರಿಸಿ ಐಸಿಸಿ ಇಂದು ಪ್ರಕಟಣೆ ಹೊರಡಿಸಿದೆ.ಭಾರತ ಮತ್ತು ಪಾಕ್‌ ಒಂದೆ ಗುಂಪಿನಲ್ಲಿ ಕಾಣಿಸಿಕೊಂಡಿದ್ದು, ಕ್ವಾಲಿಫ‌ಯರ್‌ 1 ಗುಂಪಿನಲ್ಲಿ ಇರುವ ಇತರೆರಡು ಬಲಾಡ್ಯ ತಂಡಗಳು ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ .ಕ್ವಾಲಿಫ‌ಯರ್‌ 2 ಗುಂಪಿನಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಮತ್ತು ಇಂಗ್ಲೆಂಡ್‌ ತಂಡಗಳಿವೆ.

ಮಾರ್ಚ್ 8ರಿಂದ ಏಪ್ರಿಲ್ 3ರವರೆಗೆ 27 ದಿನಗಳ ಕಾಲ ಬೆಂಗಳೂರು, ಚೆನ್ನೈ, ಧರ್ಮಶಾಲ, ಕೋಲ್ಕತ್ತಾ, ಮೊಹಾಲಿ, ಮುಂಬೈ, ನಾಗ್ಪುರ ಮತ್ತು ದೆಹಲಿಗಳಲ್ಲಿ ಪಂದ್ಯ ನಡೆಯಲಿದೆ.
ಭಾರತ-ಪಾಕಿಸ್ತಾನ ನಡುವೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಾರ್ಚ್ 19ರಂದು ಪಂದ್ಯ ನಡೆಯಲಿದೆ. ಟಿ-20 ವಿಶ್ವಕಪ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್