ನವದೆಹಲಿ: ಟೆನಿಸ್ ಲೋಕದ ದಿಗ್ಗಜ ರಾಫೆಲ್ ನಡಾಲ್, ಸಾನಿಯಾ ಮಿರ್ಜಾ, ಬೋಪಣ್ಣ ಸೇರಿದಂತೆ ದೈತ್ಯ ಪ್ರತಿಭೆಗಳನ್ನು ಹೊಂದಿರುವ ಇಂಡಿಯನ್ ಏಸಸ್ ತಂಡ, ಗುರುವಾರ ಇಲ್ಲಿ ನಡೆದ ಇಪಿಟಿಎಲ್ ಪಂದ್ಯಾವಳಿಯ, ಫಿಲಿಪ್ಪೀನ್ಸ್ ಮೇವರಿಕ್ಸ್ ವಿರುದ್ಧದ ಮುಖಾಮುಖಿಯಲ್ಲಿ 30--12 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು.
ಒಟ್ಟಾರೆ ಐದು ಸೆಟ್‍ಗಳ ಮುಖಾಮುಖಿಯಲ್ಲಿ ಎಲ್ಲಾ ಸೆಟ್‍ಗಳಲ್ಲೂ ಜಯ ಸಾಧಿಸಿದ ಭಾರತೀಯ ಆಟಗಾರರು ವಿಜೃಂಭಿಸಿದರು. ಮೊದಲು ನಡೆದ ಮಿಶ್ರ ಡಬಲ್ಸ್‍ನ ಸೆಟ್‍ನಲ್ಲಿ ಏಸಸ್‍ನ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಜೋಡಿ, ಎದುರಾಳಿ ಪಡೆಯ ಟ್ರೆಟ್ ಹ್ಯುಯೆ ಹಾಗೂ ಅಜ್ಲಾ ಟೋಮ್ ಜಾಲ್ವಿಕ್ ಜೋಡಿ ವಿರುದ್ಧ 6-2 ಅಂತರದಲ್ಲಿ ಜಯ ಸಾಧಿಸಿತು. ಆನಂತರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ, ಏಸಸ್‍ನ ಅಗ್ನಿಸ್ಕಾ ರಾಡ್ವಾಂಸ್ಕಾ, ಜಾರ್ಮಿಲಾ ಗಾಜ್ಡೋಸೊವಾ ವಿರುದ್ಧ 6-1ಅಂತರದಲ್ಲಿ ಗೆಲವು ಪಡೆದರು.
ಇದಾದ ಮೇಲೆ, ಪುರುಷರ ಲೆಜೆಂಡ್ಸ್ ಸುತ್ತು ನಡೆಯಿತು. ಇದರಲ್ಲಿ ಕಣಕ್ಕಿಳಿದಿದ್ದ ಏಸಸ್‍ನ ಫ್ಯಾಬ್ರಿಸ್ ಸ್ಯಾಂಟೊರೊ, ಎದುರಾಳಿ ಮಾರ್ಕ್ ಫಿಲಿಪ್ಟೊಸಿಸ್ ವಿರುದ್ಧ 6-1ರಲ್ಲಿ ಜಯ ಗಳಿಸಿದರು. ಇದಾದ ಮೇಲೆ ನಡೆದ ಪುರುಷರರ ಡಬಲ್ಸ್ ಪಂದ್ಯದಲ್ಲಿ, ಏಸಸ್‍ನ ರಾಫೆಲ್ ನಡಾಲ್ ಹಾಗೂ ರೋಹನ್ ಬೋಪಣ್ಣ ಜೋಡಿ, ಎಡ್ವರ್ಡ್ ರೋಜರ್-ವ್ಯಾಸೆಲಿನ್ ಹಾಗೂ ಟ್ರೆಟ್ ಹ್ಯುಯೆ ವಿರುದ್ಧ 6 -4 ಅಂತರದಲ್ಲಿ ಗೆಲವು ಪಡೆಯಿತು. ಇನ್ನು, ಅಂತಿಮ ಸೆಟ್ ಆದ ಪುರುಷರ ಸಿಂಗಲ್ಸ್‍ನಲ್ಲಿ ರಾಫೆಲ್ ನಡಾಲ್, ರೋಜರ್-ವ್ಯಾಸೆಲೀನ್ ವಿರುದ್ಧ 6-4ರಲ್ಲಿ ಜಯ ಸಾಧಿಸಿದರು.
ಜಪಾನ್‍ಗೆ ಜಯ: ಗುರುವಾರ ನಡೆದ ಮುಖಾಮುಖಿಯಲ್ಲಿ ಜಪಾನ್ ತಂಡ, ಯುಎಇ ರಾಯಲ್ಸ್ ವಿರುದ್ಧ 24-21 ಅಂಕಗಳ ಗೆಲವು ಸಾಧಿಸಿತು. ಮೊದಲಿಗೆ ನಡೆದ ಮಹಿಳೆಯರ ಸಿಂಗಲ್ಸ್‍ನಲ್ಲಿ ಜಪಾನ್ ತಂಡದ ಮಿರ್ಜಾನಾ ಲೂಸಿಕ್-ಬರೋನಿ, ರಾಯಲ್ಸ್‍ನ ಅನಾ ಇವಾನೊವಿಚ್ ವಿರುದ್ಧ 2-6 ಅಂತರದಲ್ಲಿ ಮಣಿದರು. ಇದಾದ ಮೇಲೆ ನಡೆದ ಲೆಜೆಂಡ್ಸ್ ಪುರುಷರ ಸಿಂಗಲ್ಸ್ ಮುಖಾಮುಖಿ ಯಲ್ಲಿ ಜಪಾನ್‍ನ ಥಾಮಸ್ ಇನ್‍ಕ್ವಿಸ್ಟ್ ಅವರು, ರಾಯಲ್ಸ್‍ನ ಗೊರಾನ್ ಇವಾನಿಸೆವಿಕ್ ವಿರುದ್ಧ 6-4 ಅಂತರದಲ್ಲಿ ಸೋಲುಂಡರು. ಆದರೆ, ನಂತರ ನಡೆದ ಪುರುಷರ ಡಬಲ್ಸ್‍ನಲ್ಲಿ ಪೇಸ್-ಹರ್ಬರ್ಟ್, ಥಾಮಸ್ ಬೆರ್ಡಿಚ್ -ಡೇನಿಯಲ್ ನೆಸ್ಟರ್ ವಿರುದ್ಧ ಗೆಲವು ಪಡೆದರು. ಇದಾದ ಬಳಿಕ ಜಪಾನ್ ತಂಡ ಹಿಂದಿರುಗಿ ನೋಡಲಿಲ್ಲ. ಆನಂತರ ನಡೆದ ಪುರುಷರ ಸಿಂಗಲ್ಸ್ ಸೆಟ್‍ನಲ್ಲಿ ಜಪಾನ್‍ನ ಥಾಮಸ್ ಬೆರ್ಡಿಚ್, ಹರ್ಬರ್ಟ್ ವಿರುದ್ಧ 6-4ರ ಜಯ ಸಾಧಿಸಿದರು.
ಇನ್ನು, ಕೊನೆಯ ಮುಖಾಮುಖಿಯಾದ ಮಿಶ್ರ ಡಬಲ್ಸ್‍ನಲ್ಲಿ ಜಪಾನ್‍ನ ಹರ್ಬರ್ಟ್- ಲೂಸಿಕ್ ಜೋಡಿ, ರಾಯಲ್ಸ್‍ನ ನೆಸ್ಟರ್- ಮಾ್ಲಡೊನೊವಿಚ್ ಜೋಡಿ ವಿರುದ್ಧ 6-2 ಅಂತರದಲ್ಲಿ ಜಯ ಸಾಧಿಸಿತು.