ನವದೆಹಲಿ: ಬಹು ನಿರೀಕ್ಷಿತ ಪ್ರೊ.ರೆಸ್ಲಿಂಗ್ ಲೀಗ್ ಟೂರ್ನಿಯ ಬೆಂಗಳೂರಿನ ಫ್ರಾಂಚೈಸಿ ತಂಡವಾಗಿರುವ ಬೆಂಗಳೂರು ಯೋಧಾಸ್ ಜತೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೈಜೋಡಿಸಿದ್ದಾರೆ.
ತಂಡದ ಷೇರುಗಳನ್ನು ಖರೀದಿಸುವ ಮೂಲಕ ಕೊಹ್ಲಿ ಬೆಂಗಳೂರು ಯೋಧಾಸ್ ತಂಡದ ಸಹ ಮಾಲೀಕರಾಗಿದ್ದಾರೆ. ``ಪ್ರೊ. ರೆಸ್ಲಿಂಗ್ ಲೀಗ್ ಟೂರ್ನಿ ಹಾಗೂ ಬೆಂಗಳೂರು ಯೋಧಾಸ್ ತಂಡ ಬಗ್ಗೆ ಕೇಳಿದಾಗಲೇ ರೋಮಾಂಚಿತನಾಗಿದ್ದೆ. ಬೆಂಗಳೂರು ನಗರದೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದೇನೆ. ಯೋಧಾಸ್ ತಂಡದ ಷೇರುಗಳನ್ನು ಬೆಂಗಳೂರಿನ ಜತೆಗೆ ಅತ್ಯುತ್ತಮ ಸಂಬಂಧ ಹೊಂದಿದ್ದು, ಯೋಧಾಸ್ ತಂಡದ ಮೂಲಕ ಅದನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದೇನೆ'' ಎಂದು ಕೊಹ್ಲಿ ತಿಳಿಸಿದ್ದಾರೆ.