ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವೆಸ್ಟ್ ಇಂಡೀಸ್‍ಗೆ ಇನ್ನಿಂಗ್ಸ್ ಸೋಲು

ಬ್ಯಾಟಿಂಗ್ ಮತ್ತು ಬೌಲಿಂಗ್ ಈ ಎರಡು ವಿಭಾಗಗಳಲ್ಲಿಯೂ ಆಕ್ರಮಣಕಾರಿ ಪ್ರದರ್ಶನ ನೀಡಿದ ಆತಿಥೇಯ ಆಸ್ಟ್ರೇಲಿಯಾ, ಪ್ರವಾಸಿ ವೆಸ್ಟ್ ಇಂಡೀಸ್...

ಜೇಮ್ಸ್ ಪ್ಯಾಟಿನ್‍ಸನ್ (ಕೃಪೆ: ಎಎಫ್ ಪಿ)
Rashmi Kasaragodu
Updated On : 13 Dec 2015, 11:51 am
ಹೋಬರ್ಟ್ : ಬ್ಯಾಟಿಂಗ್ ಮತ್ತು ಬೌಲಿಂಗ್ ಈ ಎರಡು  ವಿಭಾಗಗಳಲ್ಲಿಯೂ ಆಕ್ರಮಣಕಾರಿ ಪ್ರದರ್ಶನ ನೀಡಿದ ಆತಿಥೇಯ  ಆಸ್ಟ್ರೇಲಿಯಾ, ಪ್ರವಾಸಿ ವೆಸ್ಟ್ ಇಂಡೀಸ್  ತಂಡದ ವಿರುದ್ಧ ಇನ್ನಿಂಗ್ಸ್ ಮತ್ತು 212  ರನ್ ಗೆಲುವು ದಾಖಲಿಸಿದೆ. ವೇಗಿ ಜೇಮ್ಸ್ ಪ್ಯಾಟಿನ್‍ಸನ್ (27/5) ತೋರಿದ ಮೊನಚಿನ ಪ್ರದರ್ಶನದಿಂದಾಗಿ  ತನ್ನ ಎರಡನೇ ಇನ್ನಿಂಗ್ಸ್‍ನಲ್ಲಿ 36.3 ಓವರ್  ಗಳಲ್ಲಿ 148 ರನ್‍ಗಳಿಗೆ ವಿಂಡೀಸ್ ಸರ್ವಪತನ ಕಂಡು ಹೀನಾಯ  ಸೋಲಪ್ಪಿತು.
ಆರಂಭಿಕ ಕ್ರೆಗ್ ಬ್ರಾತ್‍ವೈಟ್ (94:122 ಎಸೆತ, 13 ಬೌಂಡರಿ, 1 ಸಿಕ್ಸರ್)  ಏಕಾಂಗಿ ಹೋರಾಟವೊಂದೇ ಪ್ರವಾಸಿ  ತಂಡದ ಗರಿಷ್ಠ ಸ್ಕೋರ್ ಎನಿಸಿತು. ಎಲ್ಲಕ್ಕಿಂತ
ಮಿಗಿಲಾಗಿ ನಾಯಕ ಜೇಸನ್ ಹೋಲ್ಡರ್  (17) ಮತ್ತು ಜೆರೋಮ್  ಟೇಲರ್ (12) ಬಿಟ್ಟರೆ ಮಿಕ್ಕವರು ಎರಡಂಕಿ ದಾಟದೆ  ಹೋದದ್ದು ಕಾಂಗರೂಗಳ ಈ ಭರ್ಜರಿ ಗೆಲುವಿಗೆ ಕಾರಣವಾಯಿತು. ಪ್ಯಾಟಿನ್ಸನ್  ಅಲ್ಲದೆ, ಜೋಶ್ ಹ್ಯಾಜ್ಲೆವುಡ್ 33ಕ್ಕೆ 3  ಮತ್ತು ಮಿಚೆಲ್ ಮಾರ್ಶ್ 36ಕ್ಕೆ 1 ವಿಕೆಟ್  ಗಳಿಸಿದರು.  ಮೊದಲ ಇನ್ನಿಂಗ್ಸ್ ನಲ್ಲಿ 114 ಓವರ್  ಗಳಲ್ಲಿ 4 ವಿಕೆಟ್ ನಷ್ಟಕ್ಕೆ 583 ರನ್ ಮಾಡಿ  ಡಿಕ್ಲೇರ್ ಮಾಡಿಕೊಂಡಿದ್ದ ಆಸ್ಟ್ರೇಲಿಯಾ  ವಿರುದ್ಧ ಡರೆನ್ ಬ್ರಾವೊ (108) ಗಳಿಸಿದ  ಶತಕದ ನೆರವಿನಿಂದ 223 ರನ್‍ಗಳಿಗೆ ಆಲೌಟ್ ಆದ ವಿಂಡೀಸ್, ಫಾಲೋಆನ್  ಪಡೆದು ಎರಡನೇ ಇನ್ನಿಂಗ್ಸ್‍ನಲ್ಲೂ ಕಾಂಗರೂಗಳ ದಾಳಿಗೆ ನಲುಗಿತು.  ಅಜೇಯ 269 ರನ್ ಗಳಿಸಿ ತಂಡದ  ಬೃಹತ್ ಮೊತ್ತಕ್ಕೆ ಕಾರಣವಾದ ಆ್ಯಡಂ ವೋಗ್ಸ್ ಸಹಜವಾಗಿಯೇ ಪಂದ್ಯಶ್ರೇಷ್ಠ  ಪ್ರಶಸ್ತಿಗೆ ಭಾಜನರಾದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement