ದಿಲ್ಲಿ ವೀರ್ಸ್ ನ ಗುರುಪಾಲ್ ಸಿಂಗ್ ಹರ್ಯಾಣ ಹ್ಯಾಮರ್ಸ್ ನ ಯೂರಿ ಮೇರ್ ವಿರುದ್ಧ ಸೆಣಸಾಡುತ್ತಿರುವುದು (ಕೃಪೆ: ಪಿಟಿಐ) 
ಕ್ರೀಡೆ

ದಿಲ್ಲಿ ವೀರ್ಸ್ ವಿರುದ್ಧ ಹರ್ಯಾಣ ಜಯ

ಸ್ಟಾರ್ ಆಟಗಾರ ಯೋಗೇಶ್ವರ್ ದತ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಒಕಾಸಾನಾ ಹೆರ್ಹೆಲ್ ಅವರ ಭರ್ಜರಿ ಪ್ರದರ್ಶನದ ಸಹಾಯದಿಂದ, ಹರ್ಯಾಣ...

ನವದೆಹಲಿ: ಸ್ಟಾರ್ ಆಟಗಾರ ಯೋಗೇಶ್ವರ್ ದತ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ಒಕಾಸಾನಾ ಹೆರ್ಹೆಲ್ ಅವರ ಭರ್ಜರಿ ಪ್ರದರ್ಶನದ ಸಹಾಯದಿಂದ, ಹರ್ಯಾಣ  ಹ್ಯಾಮರ್ಸ್ ತಂಡ, ಶನಿವಾರ ನಡೆದ ಪ್ರೊ ರೆಸ್ಲಿಂಗ್‍ನ  ಲೀಗ್ ಪಂದ್ಯದಲ್ಲಿ ದಿಲ್ಲಿ ವೀರ್ಸ್ ತಂಡದ ವಿರುದ್ಧ 5-2 ಅಂತರದ ಜಯ ಸಾಧಿಸಿತು. ಆದರೂ, ವಿನೇಶ್  ಫೋಗಟ್ ಗಳಿಸಿದ ಜಯ ಹಾಗೂ ಇತರ ಸ್ಪರ್ಧಾಳುಗಳು  ತೋರಿದ ತೀವ್ರ ಹೋರಾಟದ ಪರಿಣಾಮ ದಿಲ್ಲಿ ತಂಡ  ಕೃಪಾಂಕ ಪಡೆಯುವಲ್ಲಿ ಯಶಸ್ವಿಯಾಯಿತು. ಹರ್ಯಾಣದ ಪರ ಕಣಕ್ಕಿಳಿದಿದ್ದ ಲಿವಾನ್ ಲೋಪೆಜ್ ಅಜ್ಯುಸಿ , ದಿಲ್ಲಿ ತಂಡದ ದಿನೇಶ್ ಕುಮಾರ್ ಅವರನ್ನು  7-0 ಅಂತರದಲ್ಲಿ ಸೋಲಿಸಿದರು. ಮತ್ತೊಂದು  ಪಂದ್ಯದಲ್ಲಿ, ದಿಲ್ಲಿ ತಂಡದ ಗುರ್ಬಾಲ್ ಸಿಂಗ್,  ಹರ್ಯಾಣದ ಯೂರಿ ಮಿಯರ್ ವಿರುದ್ಧ ಗೆಲವು  ಸಾಧಿಸಿದರು. ಆನಂತರ ನಡೆದ ಮಹಿಳೆಯರ ಸುತ್ತಿನ  ಪಂದ್ಯದಲ್ಲಿ ಒಕ್ಸಾನಾ ಹೆರ್ಹೆಲ್ ಅವರು, ದಿಲ್ಲಿ ತಂಡದ  ಯೆಸಿಲಿರ್ಮಾರ್ಕ್ ವಿರುದ್ಧ ಜಯ ಗಳಿಸಿದರು. ಅಲ್ಲಿಗೆ, ದಿಲ್ಲಿ ತಂಡ, ಹರ್ಯಾಣ ವಿರುದ್ಧ 2-1ರ  ಮುನ್ನಡೆ ಸಾಧಿಸಿತು. ಆದರೆ ಇದಾದ ಮೇಲೆ, ಹರ್ಯಾಣ ಮತ್ತೆರಡು ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ದಿಲ್ಲಿಯ  ವೇಗಕ್ಕೆ ಕಡಿವಾಣ ಹಾಕಿತು. ಮಹಿಳೆಯರ ಸುತ್ತಿನ ಪಂದ್ಯದ ಬಳಿಕ ನಡೆದ ಪುರುಷರ ಪಂದ್ಯದಲ್ಲಿ ಹರ್ಯಾಣದ ಹಿತೇಂದರ್, ದಿಲ್ಲಿಯ ಕ್ರಿಶನ್ ಕುಮಾರ್ ವಿರುದ್ಧ ಜಯ ಸಾಧಿಸಿದರೆ, ಗೀತಿಕಾ ಜಾಖರ್ ಅವರು,  ದಿಲ್ಲಿಯ ನಿಕ್ಕಿ ವಿರುದ್ಧ 2-2ರ ಅಂಕಗಳಲ್ಲಿದ್ದಾಗ,  ಎದುರಾಳಿ ಸ್ಪರ್ಧೆಯಿಂದ ಹಿಂದೆ ಸರಿದ ಪರಿಣಾಮ ತಾಂತ್ರಿಕ ವಿಧಾನದ ಅನುಸಾರ ಗೆಲವು ಸಾಧಿಸಿದರು.
ವಿಜೇಶ್ ಫೋಗಟ್ ಅವರು, ಹರ್ಯಾಣ ತಂಡದ ನಿರ್ಮಲಾ ದೇವಿ ವಿರುದ್ಧ ಜಯ ಸಾಧಿಸಿದರು. ಈ ಮೂಲಕ, ಅಂಕ ಗಳಿಕೆಯಲ್ಲಿ ಪುನಃ ಹರ್ಯಾಣ  ವಿರುದ್ಧ ಸಮಬಲ ಸಾಧಿಸಲು ದಿಲ್ಲಿಗೆ ನೆರವಾದರು.  ಆದರೆ, ಆನಂತರ ನಡೆದ ಮತ್ತೊಂದು ಪಂದ್ಯದಲ್ಲಿ,  ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ  ಉಜ್ಬೇಕಿಸ್ತಾನದ ನವ್ರುಜೋವ್ ಇಖ್ತಿಯೋರ್ ವಿರುದ್ಧ ಸೆಣಸಿದ ಹರ್ಯಾಣ ತಂಡದ ಯೋಗೇಶ್ವರ್ ದತ್,  ಆ ಪಂದ್ಯದಲ್ಲಿ 3-2 ಅಂತರದ ರೋಚಕ ಜಯ ಸಾಧಿಸಿ, ಹ್ಯಾಮರ್ಸ್ ತಂಡಕ್ಕೆ ದಿಲ್ಲಿ ವಿರುದ್ಧ ಗೆಲವು ತಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT