ರಿಂಡಿ ಜೆನೈರೊ: ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ರಿಯೋ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿನ ಕ್ರೀಡಾಂಗಣಗಳು ಶೇ.80ರಷ್ಟು ಸಿದ್ಧವಾಗಿವೆ ಎಂದು ಆಯೋಜನಾ ಸಮಿತಿ ಮುಖ್ಯಸ್ಥ ಕಾರ್ಲೊಸ್ ನುಜ್ಮನ್ ತಿಳಿಸಿದ್ದಾರೆ. ಪ್ರಸಕ್ತ ವಾರ ನುಜ್ಮನ್ ಹಾಗೂ 2016 ರಿಯೋನ ಸಿಇಒ ಸಿಡ್ನಿ ಲೆವಿ ಕ್ರೀಡಾಕೂಟದ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದರು. ``ಒಲಿಂಪಿಕ್ಸ್ ಕ್ರೀಡಾಂಗಣಗಳನ್ನು ಯಾವುದೇ ಸಮಸ್ಯೆ ಎದುರಾಗದಂತೆ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಶೇ.80 ರಷ್ಟು ಕ್ರೀಡಾಂಗಣ ಪೂರ್ಣಗೊಂಡಿದೆ. ಕೆಲವು ಕ್ರೀಡಾಂಗಣಗಳು ಪೂರ್ಣ ವಾಗಿದೆ'' ಎಂದು ನುಜ್ಮನ್ ತಿಳಿಸಿದ್ದಾರೆ.