ಡೇವಿಡ್ ವಾರ್ನರ್ 
ಕ್ರೀಡೆ

ಆಸೀಸ್ ಏಕದಿನ ತಂಡಕ್ಕೆ ವಾರ್ನರ್ ನಾಯಕ?

ಶೀಘ್ರದಲ್ಲೇ ಆರಂಭಗೊಳ್ಳಲಿರುವ ಭಾರತ ವಿರುದ್ಧ ಸೀಮಿತ ಓವರ್‍ಗಳ ಪಂದ್ಯಗಳ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಅನುಭವಿ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್...

ಶೀಘ್ರದಲ್ಲೇ ಆರಂಭಗೊಳ್ಳಲಿರುವ ಭಾರತ ವಿರುದ್ಧ ಸೀಮಿತ ಓವರ್‍ಗಳ ಪಂದ್ಯಗಳ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಅನುಭವಿ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಮುನ್ನಡೆಸುವ ಸಾಧ್ಯತೆಗಳಿವೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ತಂಡದ ನಾಯಕ ಸ್ಟೀವನ್ ಸ್ಮಿತ್ ಇನ್ನೂ ಆ ಸಮಸ್ಯೆಯಿಂದ ಬರಬಂದಿಲ್ಲವಾದ್ದರಿಂದ ಭಾರತ ವಿರುದ್ಧದ ಏಕದಿನ ಸರಣಿಗೆ ಅವರು ಅಲಭ್ಯವಾಗಲಿರುವುದು ಬಹುತೇಕ ನಿಶ್ಚಿತವಾಗಿದೆ. ಹಾಗಾಗಿ, ಅವರ ಅನುಪಸ್ಥಿತಿಯಲ್ಲಿ, ಡೇವಿಡ್ ವಾರ್ನರ್ ತಂಡವನ್ನು ಮುನ್ನಡೆಸಲಿದ್ದಾರೆನ್ನಲಾಗಿದೆ.

ಮೊಣಕಾಲು ನೋವಿನಿಂದ ಬಳಲುತ್ತಿರುವ ಸ್ಮಿತ್, ಹಾಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹಿಂದೆ ಸರಿದಿದ್ದಾರೆ. ಅವರಿನ್ನೂ ಚಿಕಿತ್ಸೆಯಲ್ಲಿದ್ದಾರೆ. ತಂಡದ ಆಯ್ಕೆ ಮಂಡಳಿ ಹಾಗೂ ತಂಡದ ವೈದ್ಯಕೀಯ ಸಿಬ್ಬಂದಿ ಅವರಿಗೆ ದೀರ್ಘಕಾಲದ ವಿಶ್ರಾಂತಿಗೆ ಸೂಚಿಸಿದ್ದಾರೆ. ಇದೇ ವರ್ಷದ ಬಿಗ್ ಬ್ಯಾಷ್ ಪಂದ್ಯಾವಳಿಯ ಆರಂಭಿಕ ಸುತ್ತಿನ ಪಂದ್ಯಗಳಲ್ಲೇ ಅವರು ಮೊಣಕಾಲು ನೋವಿನ ಸಮಸ್ಯೆಗೆ ತುತ್ತಾಗಿದ್ದರು. ಕೆಲಕಾಲ ವಿಶ್ರಾಂತಿಯ ತರುವಾಯ, ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಗೂ ಅವರು ಆಯ್ಕೆಯಾಗಿದ್ದರು  ಆದರೆ, ಆ ಸರಣಿಯ ಅಂತ್ಯದಲ್ಲಿ ಅವರು ಪುನಃ ಮೊಣಕಾಲು ನೋವಿಗೆ ಗುರಿಯಾದರು.

ಸ್ಮಿತ್ ಅವರಿಗೆ ಕೆಲ ಕಾಲ ದೂರ ಉಳಿಯಲಿದ್ದಾರೆಂದು, ತಂಡದ ಕೋಚ್ ಡರೇನ್ ಲೇಮನ್ ಸಹ ಹೇಳಿದ್ದಾರೆ. ``ನಾಯಕತ್ವದ ಹೊಣೆಗಾರಿಕೆ ಬಲು ದೊಡ್ಡದು. ಇದರಿಂದ ತಮ್ಮ ಮೇಲೆ ಹೆಚ್ಚು ಒತ್ತಡವಾಗುತ್ತಿರುವುದರ ಬಗ್ಗೆ ಖುದ್ದಾಗಿ ಅವರೇ ತಿಳಿಸಿದ್ದರು. ಸದ್ಯಕ್ಕೆ ಸ್ಮಿತ್ ಅವರಿಗೆ
ವಿಶ್ರಾಂತಿ ನೀಡಿದ್ದೇವೆ. ಕೆಲವು ದಿನಗಳ ನಂತರ ಚೇತರಿಸಿಕೊಂಡು ಅವರು, ಪುನಃ ಕಣಕ್ಕಿಳಿಯಲಿದ್ದಾರೆ'' ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!