ನ್ಯೂಜಿಲೆಂಡ್ ತಂಡ 
ಕ್ರೀಡೆ

ಡುನೆಡಿನ್ ಟೆಸ್ಟ್: ಜಯಕ್ಕಾಗಿ ಮ್ಯಾಥ್ಯೂಸ್ ಪಡೆಗೆ 405 ರನ್ ಗುರಿ; ಕೆರಳಿದ ಕುತೂಹಲ

ಪ್ರಭುತ್ವ ಸಾಧಿಸಿರುವ ನ್ಯೂಜಿಲೆಂಡ್, ಗೆಲವಿಗಾಗಿ ಲಂಕನ್ನರಿಗೆ 405 ರನ್‍ಗಳ ಬೃಹತ್ ಗುರಿ ನೀಡಿದೆ. ಪಂದ್ಯದ 4ನೇ ದಿನವಾದ ಭಾನುವಾರ ತನ್ನ ದ್ವಿತೀಯ ಇನಿಂಗ್ಸ್ ಅನ್ನು 267 ರನ್‍ಗಳಿಗೆ ಡಿಕ್ಲೇರ್

ಪ್ರಭುತ್ವ ಸಾಧಿಸಿರುವ ನ್ಯೂಜಿಲೆಂಡ್, ಗೆಲವಿಗಾಗಿ ಲಂಕನ್ನರಿಗೆ 405 ರನ್‍ಗಳ ಬೃಹತ್ ಗುರಿ ನೀಡಿದೆ. ಪಂದ್ಯದ 4ನೇ ದಿನವಾದ ಭಾನುವಾರ ತನ್ನ ದ್ವಿತೀಯ ಇನಿಂಗ್ಸ್ ಅನ್ನು 267 ರನ್‍ಗಳಿಗೆ ಡಿಕ್ಲೇರ್ ಮಾಡಿಕೊಂಡ ನ್ಯೂಜಿಲೆಂಡ್, ಪ್ರವಾಸಿಗರಿಗೆ ಸವಾಲು ಒಡ್ಡಿತು. ಆನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಶ್ರೀಲಂಕಾ, ದಿನಾಂತ್ಯದ ಹೊತ್ತಿಗೆ 3 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದ್ದು, ಗೆಲವಿಗಾಗಿ ಇನ್ನೂ 296 ರನ್ ಪೇರಿಸಬೇಕಿದೆ. ಮಳೆಯಿಂದಾಗಿ ಆಗಾಗ ತೊಂದರೆಗೊಳಗಾಗುತ್ತಿರುವ ಈ ಪಂದ್ಯ ನಡೆಯುತ್ತಿರುವ ಇಲ್ಲಿನ ಪಿಚ್ ಈಗಾಗಲೇ ನಿರ್ಜೀವವಾಗಿದ್ದು, ಕೊನೆಯ ದಿನದಾಟದಲ್ಲಿ ಲಂಕಾಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.

ಲಾಥಮ್ ಶತಕ: ಭಾನುವಾರದ ದಿನದಾಟದಲ್ಲಿ ನ್ಯೂಜಿಲೆಂಡ್ ಆರಂಭಿಕ ಲಾಥಮ್ ಶತಕ ಸಿಡಿಸಿದ್ದು ವಿಶೇಷವಾಗಿತ್ತು. ಶನಿವಾರ ದಿನಾಂತ್ಯದ ಹೊತ್ತಿಗೆ 72 ರನ್ ಗಳಿಸಿದ್ದ ಲಾಥಮ್, ಭಾನುವಾರ ಕೇನ್ ವಿಲಿಯಮ್ಸನ್ ಜತೆಗೆ 2ನೇ ವಿಕೆಟ್‍ಗೆ 141 ರನ್‍ಗಳ ಜತೆಯಾಟ ನೀಡಿದರು. ಅರ್ಧಶತಕ ಪೂರೈಸಿ 72 ರನ್ ಗಳಿಸಿದ್ದ ಕೇನ್ ವಿಲಿಯಮ್ಸನ್, ಚಮೀರಾಗೆ ವಿಕೆಟ್ ಒಪ್ಪಿಸಿದ ನಂತರ, ಇನಿಂಗ್ಸ್ ಅಂತ್ಯದವರೆಗೂ ಅಜೇಯರಾಗುಳಿದ ಅವರು ಶತಕ ಸಿಡಿಸಿದರು.

ಆರಂಭದಲ್ಲೇ ಎಡವಿದ ಶ್ರೀಲಂಕಾ: ಕಿವೀಸ್ ನೀಡಿದ 405 ರನ್‍ಗಳ ಗುರಿಯೊಂದಿಗೆ ತನ್ನ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ, ತಂಡದ ಮೊತ್ತ ಕೇವಲ 54 ರನ್ ಆಗಿದ್ದಾಗ ಆರಂಭಿಕ ಕರುಣಾರತ್ನೆ ಅವರನ್ನು ಕಳೆದುಕೊಂಡಿತು. ಈ ವಿಕೆಟ್ ಪಡೆದಿದ್ದು ಟಿಮ್ ಸೌಥೀ. ಅಲ್ಲಿಗೆ ಲಂಕಾ, 64 ರನ್‍ಗಳಿಗೆ 2 ಪ್ರಮುಖ ವಿಕೆಟ್ ಕಳೆದುಕೊಂಡಂತಾಯಿತು. ಇದಾದ ಮೇಲೆ ಜತೆಯಾದ, ಕುಸಲ್ ಮೆಂಡಿಸ್ ಹಾಗೂ ಚಂಡೀಮಲ್ 3ನೇ ವಿಕೆಟ್‍ಗೆ 45 ರನ್ ಸೇರಿಸಿದರು.
ಮೆಕಲಂ ಸಾಧನೆ : ಈ ಪಂದ್ಯದಲ್ಲಿ ಎರಡು ಸಿಕ್ಸರ್ ಗಳಿಸಿದ ನಾಯಕ ಬ್ರೆಂಡಾನ್ ಮೆಕಲಂ, ಕ್ರಿಕೆಟ್ ಇತಿಹಾಸದಲ್ಲಿ 100 ಸಿಕ್ಸರ್ ಬಾರಿಸಿದ 2ನೇ ಕ್ರಿಕೆಟಿಗ ಎಂಬ ಖ್ಯಾತಿ ಪಾತ್ರರಾಗಿದ್ದಾರೆ. ಭಾನುವಾರ ದಿನದಾಟದಲ್ಲಿ 6 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 17 ರನ್ ಗಳಿಸಿದರು. ಈ ಹಿಂದೆ, ಆಸ್ಟ್ರೇಲಿಯಾದ ಆ್ಯಡಮ್ ಗಿಲ್‍ಕ್ರಿಸ್ಟ್ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್

ಟಿವಿ, ಒಟಿಟಿಗೆ ಬರುತ್ತಾ 'ಪ್ರೇಮದ ಊರಲಿ'? ಚಿತ್ರತಂಡ ಹೇಳಿದ್ದೇನು?

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!