ಧೋನಿ ಮತ್ತು ಆರ್. ಅಶ್ವಿನ್ 
ಕ್ರೀಡೆ

ಇಂದು ಐಪಿಎಲ್ ನೂತನ, ಪ್ರಾಂಚೈಸಿಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ: ಧೋನಿ, ರೈನಾ, ಅಶ್ವಿನ್ ಮುಂಚೂಣಿಯಲ್ಲಿ

ಮುಂದಿನ ಎರಡು ವರ್ಷಗಳ ಅವಧಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ದೆ ಕಾಲಿಟ್ಟಿರುವ ನೂತನ ಫ್ರಾಂಚೈಸಿಗಳಿಗಾಗಿ ಪ್ರಮುಖ ಆಟಗಾರರ ಕರಡು ಪ್ರತಿ ...

ಮುಂಬಯಿ; ಮುಂದಿನ ಎರಡು ವರ್ಷಗಳ ಅವಧಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ದೆ ಕಾಲಿಟ್ಟಿರುವ ನೂತನ ಫ್ರಾಂಚೈಸಿಗಳಿಗಾಗಿ ಪ್ರಮುಖ ಆಟಗಾರರ ಕರಡು ಪ್ರತಿ ಸಿದ್ಧಗೊಂಡಿದೆ. ಸದ್ಯಕ್ಕೆ ಅಮಾನತು ಶಿಕ್ಷೆಯಲ್ಲಿರುವ ಐಪಿಎಲ್  ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳ 50 ಆಟಗಾರರ ಕರಡು ಪ್ರತಿಸಿದ್ಧವಾಗಿದ್ದು, ಮಂಗಳವಾರ ನೂತನ ಫ್ರಾಂಚೈಸಿಗಳಿಗಿಂದ ಇವರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2016 ಮತ್ತು 2017ನೇ ಆವೃತ್ತಿಗಳಿಗಾಗಿ ಎರಡು ನೂತನ ಫ್ರಾಂಚೈಸಿಗಳಾದ ಪುಣೆ ಹಾಗೂ ರಾಜ್‌ಕೋಟ್, ಮಂಗಳವಾರ ನಡೆಯುವ ಡ್ರಾಫ್ಟ್ ಸಿಸ್ಟಮ್‌ನಲ್ಲಿ ತಮ್ಮ ತಂಡಗಳಿಗೆ ತಲಾ ಐದು ಆಟಗಾರರನ್ನು ಆಯ್ಕೆ ಮಾಡಲಿವೆ.

ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಮುಂಬಯಿ ಕ್ರಿಕೆಟ್ ಸಂಸ್ಥೆ (ಎಂಸಿಎ)ಯ ಆವರಣದಲ್ಲಿ ಬೆಳಗ್ಗೆ 11.30ಕ್ಕೆ ಈ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡಗಳ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಗಿರುವುದರಿಂದ, ಆ ತಂಡಗಳ 50 ಆಟಗಾರರು ಹರಾಜಿಗೊಳಗಾಗಲಿದ್ದಾರೆ. ಈ ಪೈಕಿ ಪುಣೆ ಹಾಗೂ ರಾಜ್‌ಕೋಟ್ ಫ್ರಾಂಚೈಸಿಗಳು ಡ್ರಾಫ್ಟ್ ಸಿಸ್ಟಮ್‌ನಲ್ಲಿ ತಲಾ ಐದರಂತೆ ಒಟ್ಟು 10 ಆಟಗಾರರನ್ನು ಎರಡು ವರ್ಷಗಳ ಅವಧಿಗೆ ತಂಡಕ್ಕೆ ಸೇರಿಸಿಕೊಳ್ಳಲಿವೆ. ಉಳಿದ 40 ಆಟಗಾರರು ಫೆ.6ರಂದು ಬೆಂಗಳೂರಿನಲ್ಲಿ ನಡೆಯುವ ಹರಾಜಿಗೊಳಪಡಲಿದ್ದಾರೆ. ಆಟಗಾರರ ಖರೀದಿಗೆ ಹೊಸ ಫ್ರಾಂಚೈಸಿಗಳು ಕನಿಷ್ಠ 40 ಕೋ. ರೂ ಮತ್ತು ಗರಿಷ್ಠ 66 ಕೋಟಿ ರೂ.ಗಳನ್ನು ವಿನಿಯೋಗಿಸಬಹುದಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಭಾರತ ಸೀಮಿತ ಓವರ್‌ಗಳ ತಂಡದ ನಾಯಕ ಎಂ.ಎಸ್.ಧೋನಿ, ಆರ್.ಅಶ್ವಿನ್, ರವೀಂದ್ರ ಜಡೇಜಾ, ಸುರೇಶ್ ರೈನಾ, ವಿಂಡೀಸ್‌ನ ಡ್ವೇನ್ ಬ್ರಾವೊ, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲ್ಲಮ್, ರಾಜಸ್ಥಾನ್ ರಾಯಲ್ಸ್‌ನ ಸ್ಟಾರ್ ಆಟಗಾರ ಅಜಿಂಕ್ಯ ರಹಾನೆ, ಆಸೀಸ್ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಸೆಳೆಯಲು ಎರಡೂ ಫ್ರಾಂಚೈಸಿಗಳು ಮುಂದಾಗಿವೆ.

ಐಪಿಎಲ್ ಅಖಾಡದ ಯಶಸ್ವಿ ನಾಯಕ ಎಂ.ಎಸ್.ಧೋನಿ, ಪುಣೆ ತಂಡದ ಪಾಲಾಗುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ ಆಟಗಾರರ ಆಯ್ಕೆಯಲ್ಲಿ ಮೊದಲ ಅವಕಾಶ ಪಡೆದಿರುವ ಪುಣೆ, ಧೋನಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಧೋನಿ ಸಾರಥ್ಯದಲ್ಲಿ ಸೋತಿದ್ದರೂ, ಅವರ ಬೇಡಿಕೆ ಕುಗ್ಗಿಲ್ಲ. ಜಗತ್ತಿನೆಲ್ಲೆಡೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಮಾಹಿ, ಈಗಲೂ ಕ್ರಿಕೆಟ್ ಪ್ರಿಯರ ನೆಚ್ಚಿನ ಆಟಗಾರನಾಗಿದ್ದು, ಪ್ರೇಕ್ಷಕರನ್ನು ಕ್ರೀಡಾಂಗಣಕ್ಕೆ ಎಳೆದು ತರುವ ಸಾಮರ್ಥ್ಯ ಹೊಂದಿದ್ದಾರೆ. 2008ರ ಆಟಗಾರರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ಅವರನ್ನು 10.05 ಕೋಟಿ ರೂ.ಗಳಿಗೆ ಖರೀದಿಸಿತ್ತು. ಕಳೆದ 8 ಐಪಿಎಲ್ ಆವೃತ್ತಿಗಳಲ್ಲಿ ವರ್ಷಗಳಲ್ಲಿ ಸಿಎಸ್‌ಕೆ ತಂಡ ಧೋನಿ ಸಾರಥ್ಯದಲ್ಲಿ ಐದು ಬಾರಿ ಫೈನಲ್‌ಗೇರಿದ್ದು ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ. ಅಲ್ಲದೆ ಎರಡು ಬಾರಿ ಚಾಂಪಿಯನ್ಸ್ ಲೀಗ್ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದೆ.

ಐಪಿಎಲ್‌ನ ರಿವರ್ಸ್ ಬಿಡ್ಡಿಂಗ್ ವೇಳೆ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿ ಫ್ರಾಂಚೈಸಿ ಖರೀದಿಸಿದ ಪುಣೆ ತಂಡಕ್ಕೆ ಡ್ರಾಫ್ಟ್ ಸಿಸ್ಟಮ್‌ನಲ್ಲಿ ಆಟಗಾರರ ಆಯ್ಕೆಗೆ ಮೊದಲ ಅವಕಾಶ ನೀಡಲಾಗಿದೆ. ಇದಾದ ಬಳಿಕ ರಾಜ್‌ಕೋಟ್ ಫ್ರಾಂಚೈಸಿ ತನ್ನ ತಂಡಕ್ಕೆ ಐವರು ಆಟಗಾರರನ್ನು ಸೇರಿಕೊಳ್ಳಲಿವೆ. ಪುಣೆಗೆ ಮೊದಲ ಅವಕಾಶ ಲಭ್ಯವಾಗಿರುವುದರಿಂದ ಲಭ್ಯವಿರುವ ಆಟಗಾರರ ಪೈಕಿ ಖ್ಯಾತನಾಮರನ್ನು ಬುಟ್ಟಿಗೆ ಹಾಕಿಕೊಳ್ಳವ ಸಾಧ್ಯತೆಗಳಿವೆ.

2008ರಲ್ಲಿ ಐಪಿಎಲ್ ಆರಂಭವಾದಂದಿನಿಂದ ಒಂದೇ ತಂಡಗಳಲ್ಲಿರುವ ಆಟಗಾರರು ಈಗ ಅನಿವಾರ್ಯವಾಗಿ ಬೇರೆ ತಂಡಗಳ ಪಾಲಾಗಲಿದ್ದಾರೆ. ಈ ಪೈಕಿ ಕಳೆದ 8 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಎಂ.ಎಸ್.ಧೋನಿ, ಸುರೇಶ್ ರೈನಾ, ಆರ್.ಅಶ್ವಿನ್, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಶೇನ್ ವಾಟ್ಸನ್ ಇದೀಗ ಹೊಸ ತಂಡಗಳನ್ನು ಸೇರಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ