ಸಾಂದರ್ಭಿಕ ಚಿತ್ರ 
ಕ್ರೀಡೆ

ಪ್ರೊ ರೇಸ್ಲಿಂಗ್ ಲೀಗ್: ವಾರಿಯರ್ಸ್‍ಗೆ ಮೊದಲ ವಿಜಯ

ಸತತ ಎರಡನೇ ಬಾರಿ ಸೋತ ಡೆಲ್ಲಿ ಲೂಧಿಯಾನ ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಸತ್ಯವರ್ತ್ ಕಡಿಯನ್ ನಿರ್ಣಾಯಕ ಸೆಣಸಿನಲ್ಲಿ ...

ಪ್ರೊ ರೇಸ್ಲಿಂಗ್ ಲೀಗ್: ಸತತ ಎರಡನೇ ಬಾರಿ ಸೋತ ಡೆಲ್ಲಿ ಲೂಧಿಯಾನ ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಸತ್ಯವರ್ತ್ ಕಡಿಯನ್ ನಿರ್ಣಾಯಕ ಸೆಣಸಿನಲ್ಲಿ ಕೊಟ್ಟ ಮುನ್ನಡೆಯೊಂದಿಗೆ ಉತ್ತಪ್ರದೇಶ ವಾರಿಯರ್ಸ್ ತಂಡ ಪ್ರೊ ರೇಸ್ಲಿಂಗ್ ಲೀಗ್ ಟೂರ್ನಿಯಲ್ಲಿ ಮೊದಲ ಜಯ ಸಂಪಾದಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ವಾರಿಯರ್ಸ್ ತಂಡ ಡೆಲ್ಲಿ ವೀರ್ ತಂಡದ ವಿರುದ್ಧ 4-3 ಅಂತರದ ರೋಚಕ ಜಯ ಸಂಪದಿಸಿದೆ. ಮೊದಲ ಪಂದ್ಯದಲ್ಲಿ ಪುರುಷರ 57 ಕೆ.ಜಿ ವಿಭಾಗದಲ್ಲಿ ಡೆಲ್ಲಿಯ ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಬೆಬಯರ್ ಎರ್ಡನೆಬಟ್, ವಾರಿಯರ್ಸ್‍ನ ಜೈದೀಪ್ ವಿರುದ್ಧ 4-3 ಅಂತರದ ಮುನ್ನಡೆ ಸಾಧಿಸಿದರು. ಮಹಿಳೆಯರ 58 ಕೆ.ಜಿ ವಿಭಾಗದಲ್ಲಿ ವಾರಿಯರ್ಸ್ ತಂಡದ ಸರಿತಾ ತಮ್ಮ ಪ್ರತಿಸ್ಪರ್ಧಿ ಟರ್ಕಿಯ ಯಾಲಿರ್ಮಕ್ ವಿರುದಟಛಿ 1-0 ಅಂತರದಿಂದ ಮುನ್ನಡೆ ಸಾಧಿಸಿದರು.

ಪುರುಷರ 125 ಕೆ.ಜಿ ವಿಭಾಗದ ಪಂದ್ಯದಲ್ಲಿ ಡೆಲ್ಲಿಯ ಕೃಷ್ಣಕುಮಾರ್, ವಾರಿಯರ್ಸ್‍ನ ಜೊಗಿದರ್ ವಿರುದ್ಧ ಮೇಲುಗೈ ಸಾಧಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಡೆಲ್ಲಿಯ ವಿನೇಶ್ ಪೋಗತ್ ಕೊಗುಟ್ ಒಲೆಕ್ಸಾಂಡ್ರಾ ವಿರುದಟಛಿ ತಾಂತ್ರಿಕ ಆಧಾರದ ಮೇಲೆ 11-0 ಮುನ್ನಡೆ ಸಾಧಿಸಿದರು. ಪುರುಷರ 74 ಕೆ.ಜಿ ವಿಭಾಗದಲ್ಲಿ ಉನುರ್ಬಟ್, ಡೆಲ್ಲಿಯ ದಿನೇಶ್ ಕುಮಾರ್ ಅವರನ್ನು 5-0ಯಿಂದ ಮಣಿಸಿ ತಂಡದ ಅಂತರ ಕಡಿಮೆ ಮಾಡಿಕೊಂಡರು.

ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಬಬಿತಾ ಕುಮಾರಿ, ಡೆಲ್ಲಿಯ ಲಿಲಿಯಾ ಹೊರಿಶ್ನಾ ವಿರುದ್ಧ 13-12 ಅಂತರದ ಜಯ ಸಾದಿಸಿದರು. ನಿರ್ಣಾಯಕ ಪುರುಷರ 97 ಕೆ.ಜಿ ವಿಭಾಗದ ಪಂದ್ಯದಲ್ಲಿ ಸತ್ಯವರ್ತ್, ಗುರ್ಪಾಲ್ ರನ್ನು ಮಣಿಸಿ ತಂಡಕ್ಕೆ ಜಯ ತಂದುಕೊಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT