ಮುಂಬೈ: 2015ರ ಗೂಗಲ್ ಸರ್ಚ್‌ನಲ್ಲಿ ಭಾರತದ ಗಣ್ಯರ ಪೈಕಿ ಅತ್ಯಂತ ಹೆಚ್ಚು ಸರ್ಚ್ ಗೆ ಒಳಗಾದ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನಕ್ಕೇರಿದ್ದು, ಸಚಿನ್ ತೆಂಡೂಲ್ಕರ್ ಹಾಗೂ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಮಾತ್ರವಲ್ಲದೇ ಟಾಪ್ 10 ಸ್ಥಾನದಲ್ಲಿ 6 ಮಂದಿ ಕ್ರಿಕೆಟ್ ಆಟಗಾರರು ಸ್ಥಾನ ಪಡೆದಿದ್ದಾರೆ. ಎರಡು ವರ್ಷಗಳ ಹಿಂದೆ ಕ್ರಿಕೆಟ್ ಜೀವನಕ್ಕೆ ಗುಡ್‌ಬೈ ಹೇಳಿದ ಸಚಿನ್ ತೆಂಡೂಲ್ಕರ್ ಇಂದಿಗೂ ಕೂಡ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದು ಈ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.
ಹಿಟ್ ಅಂಡ್ ರನ್ ಸೇರಿದಂತೆ ಇನ್ನಿತರ ವಿವಾದಗಳ ಮೂಲಕ ವರ್ಷವಿಡಿ ಚಾಲ್ತಿಯಲ್ಲಿದ್ದ ಬಾಲಿವುಡ್ ನಟ ಸಲ್ಮಾನ್‌ಖಾನ್ ಎರಡನೇ ಸ್ಥಾನದಲ್ಲಿದ್ದರೆ. ಟೀಂ ಇಂಡಿಯಾ ಏಕದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂರವರು ಜಂಟಿಯಾಗಿ 3ನೇ ಸ್ಥಾನದಲ್ಲಿದ್ದಾರೆ.
ಉಳಿದಂತೆ ಶಾರುಖ್‌ಖಾನ್ (6), ಸಾನಿಯಾ ಮಿರ್ಜಾ (7), ರೋಹಿತ್ ಶರ್ಮಾ (8), ಯುವರಾಜ್ ಸಿಂಗ್ (9) ಹಾಗೂ ಪ್ರಧಾನಿ ನರೇಂದ್ರ ಮೋದಿ (10) ನಂತರದ ಸ್ಥಾನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics