ನಮ್ಮಲ್ಲಿ ರಾಜಕಾರಣಿಗಳ ಮಕ್ಕಳು ಅಂದ್ರೆ ಕೇಳ್ಬೇಕಾ? ಲೈಮ್ಲೈಟ್‍ನಲ್ಲೇ ಬೆಳೀಬೇಕು. ಮುಂದೆ ಅವರು ರಾಜಕಾರಣಿಯೋ, ಉದ್ಯಮಿಯೋ ಆಗೋದು ಕಾಮನ್. ಆದ್ರೆ, ರಷ್ಯಾದಲ್ಲಿ ಹಾಗಲ್ಲ. ವ್ಲಾಡಿಮಿರ್ ಪುಟಿನ್ ತಮ್ಮ ಮಕ್ಕಳ ವಿಚಾರದಲ್ಲಿ ಮೂಗು ತೂರಿಸುವುದೇ ಇಲ್ಲ. ರಾಜಕೀಯ, ಉದ್ಯಮರಂಗ ಎರಡನ್ನು ಬಿಟ್ಟು ಬೇರಾವುದಾದರೂ ಇಷ್ಟದ ಕ್ಷೇತ್ರಗಳನ್ನು ಆರಿಸಿಕೊಳ್ಳಿ ಎಂದು ಪುಟಿನ್ ತಮ್ಮ ಮಕ್ಕಳಿಗೆ ಈಗ ಸಲಹೆ ನೀಡಿದ್ದಾರೆ.
ಅಲ್ಲದೆ ಅವರನ್ನು ಯಾರೂ ಸ್ಟಾರ್ ಮಕ್ಕಳು ಎಂಬಂತೆ ಬಿಂಬಿಸಬೇಡಿ ಎಂದು ಜನರಲ್ಲಿ ಮನವಿ ಮಾಡ್ಕೊಂಡಿದ್ದಾರೆ. ಅಂದಹಾಗೆ, ಪುಟಿನ್ ಗೆ ಇರುವುದು ಇಬ್ಬರು ಹೆಣ್ಮಕ್ಕಳು; ಮಾರಿಯಾ ಮತ್ತು ಕ್ಯಾಥರಿನಾ. ಇಬ್ಬರೂ ಟ್ವೆಂಟಿ ಕ್ರಾಸ್ ಆಗಿದ್ದಾರೆ. ಇಬ್ಬರೂ ಮಕ್ಕಳು 3 ಯೂರೋಪಿಯನ್ ಭಾಷೆಗಳನ್ನು ಚೆನ್ನಾಗಿ ಮಾತಾಡ್ತಾರೆ. ಅಪ್ಪ ಮಾತಿನಂತೆ ಇಬ್ಬರೂ ರಾಜಕಾರಣಕ್ಕೆ ಎಂಟ್ರಿ ಆಗ್ತಿಲ್ಲ. ಕ್ಯಾಥರಿನಾ ಮಾಸ್ಕೋದ ಸ್ಟೇಟ್ ಯುನಿವರ್ಸಿಟಿಯಲ್ಲಿ ಸೀನಿಯರ್ ಪೋಸ್ಟ್ ನಲ್ಲಿದ್ದಾಳೆ. ಇನ್ನೊಬ್ಬಳು ಮಾರಿಯಾ ಪುಟಿನ್ ಬಯಾಲಜಿಯಲ್ಲಿ ಡಿಗ್ರಿ ಮುಗಿಸಿ, ಇನ್ನಾವುದೋ ಸಂಶೋಧನೆಗಾಗಿ ಹಾಲೆಂಡ್‍ನಲ್ಲಿ ವಾಸವಿದ್ದಾರೆ.