ಸಿಂಗಾಪುರ: ಹಾಲಿ ಚಾಂಪಿಯನ್ ಇಂಡಿಯನ್ ಏಸಸ್ ವಿರುದ್ಧ ಸಮರ್ಥ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಆತಿಥೇಯ ಸಿಂಗಾಪುರ ಸ್ಲಾಮರ್ಸ್ ತಂಡ ಇಂಟರ್‍ನ್ಯಾಷನಲ್ ಪ್ರಿಮಿಯರ್ ಟೆನಿಸ್ ಲೀಗ್ ಟೂರ್ನಿಯಲ್ಲಿ ಜಯ ಸಾಧಿಸಿದೆ. ಆಮೂಲಕ ಇಂಡಿಯನ್ ಏಸಸ್ ಜತೆಗೆ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲು ಅರ್ಹತೆ ಪಡೆದುಕೊಂಡಿದೆ. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಸಿಂಗಾಪುರ ಸ್ಲಾಮರ್ಸ್ ತಂಡ 27-21 ಅಂಕಗಳ ಅಂತರದಲ್ಲಿ ಇಂಡಿಯನ್ ಏಸಸ್ ತಂಡವನ್ನು ಮಣಿಸಿತು. ಇದ್ದಕ್ಕೂ ಮುನ್ನ ನಡೆದ ರೋಚಕ ಪಂದ್ಯದಲ್ಲಿ ಫಿಲಿಪ್ಪೀನ್ಸ್ ಮಾವರಿಕ್ಸ್ ತಂಡ ಸೂಪರ್ ಶೂಟ್ ಔಟ್ ಸುತ್ತಿನಲ್ಲಿ ಮುನ್ನಡೆ ಸಾಧಿಸಿ ಜಯ ಸಾಧಿಸಿದೆ. ಪಂದ್ಯದಲ್ಲಿ ಮಾವರಿಕ್ಸ್ ತಂಡ 24-23 ಅಂಕಗಳ ಅಂತರದಲ್ಲಿ ಯುಎಇ ರಾಯಲ್ಸ್ ತಂಡವನ್ನು ಮಣಿಸಿದೆ. ಪಂದ್ಯದ ಮೊದಲ ಹಣಾಹಣಿ ಪುರುಷರ ಲೆಜೆಂಡ್ಸ್ ಸಿಂಗಲ್ಸ್‍ನಲ್ಲಿ ಮಾವರಿಕ್ಸ್‍ನ ಜೇಮ್ ಸ ಬ್ಲೇಕ್ 6-4 ಅಂತರದಿಂದ ರಾಯಲ್ಸ್‍ನ ಕೊರನ್ ಇವಾನಿಸೆವಿಕ್ ವಿರುದ್ಧ, ಮಹಿಳೆಯರ ಸಿಂಗಲ್ಸ್‍ನಲ್ಲಿ ಜಾರ್ಮಿಲ್ ಗಡಸೊವಾ 6-3-ರಿಂದ ರಾಯಲ್ಸ್-ನ ಕ್ರಿಸ್ಟೀನಾ ಮಾ್ಲಡೆನೊವಿಕ್ ಅವರನ್ನು ಮಣಿಸಿದರು. ಮಿಶ್ರ ಡಬಲ್ಸ್‍ನಲ್ಲಿ ಮಾವರಿಕ್ಸ್‍ನ ಸೋಮ್ ದೇವ್ ಮತ್ತು ಗಡಸೋವಾ ಜೋಡಿ 1-6ರಿಂದ ನೆಸ್ಟರ್ ಮತ್ತು ಮಾ್ಲಡೆನೊವಿಕ್ ವಿರುದ್ಧ ಸೋಲನುಭ ವಿಸಿದ್ದು, ತಂಡದ ಹಿನ್ನಡೆಗೆ ಕಾರಣವಾಯಿತು. ಪುರುಷರ ಡಬಲ್ಸ್‍ನಲ್ಲಿ ವೆಸೆಲಿನ್ ಮತ್ತು ಹ್ಯೂಯ್ ಜೋಡಿ 6-4ರಿಂದ ರಾಯಲ್ಸ್‍ನ ಸಿಲಿಕ್ ಮತ್ತು ನೆಸ್ಟರ್ ಜೋಡಿಯನ್ನು ಮಣಿಸಿದರು. ಪುರುಷರ ಸಿಂಗಲ್ಸ್‍ನಲ್ಲಿ ವೆಸೆಲಿನ್ 4-6 ಅಂತರದಲ್ಲಿ ರಾಯಲ್ಸ್‍ನ ಮರಿನ್ ಸಿಲಿಕ್ ವಿರುದ್ಧ ಸೋಲನುಭವಿಸಿದ್ದು, ತಂಡದ ಒಟ್ಟಾರೆ ಅಂಕ 23-23ಕ್ಕೆ ಸಮಬಲವಾಗುವಂತೆ ಮಾಡಿತು.