ಬೆಂಗಳೂರು: ಮುಂದಿನ ಜನವರಿ 2ರಿಂದ ಬೆಂಗಳೂರಿನಲ್ಲಿ ನಡೆಯಲಿರುವ 64ನೇ ರಾಷ್ಟ್ರೀಯ ಹಿರಿಯರ ವಾಲಿಬಾಲ್ ಚಾಂಪಿಯನ್ ಶಿಪ್‍ಗೆ ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯ ವಾಲಿಬಾಲ್ ತಂಡದೊಂದಿಗೆ ಸೆಲೆಬ್ರಿಟಿ ತಂಡ ಪ್ರದರ್ಶನ ಪಂದ್ಯವನ್ನಾಡಿತು.
ಆ ಮೂಲಕ ಟೂರ್ನಿಗೆ ಬೆಂಬಲ ನೀಡಲಾಯಿತು. ಸೆಲೆಬ್ರಿಟಿ ತಂಡದಲ್ಲಿ ಚಿತ್ರನಟರಾದ ರಕ್ಷಿತ್, ವಸಿಷ್ಠ್, ಚೇತನ್ ಚಂದ್ರ, ಸಂತೋಷ್ ಮತ್ತು ರವಿತೇಜ ಜತೆಗೆ ಟೂರ್ನಿಯ ಸಂಘಟನಾ ಸಮಿತಿ ಅಧ್ಯಕ್ಷರಾದ ಹರೀಶ್, ರಾಜ್ಯ ವಾಲಿಬಾಲ್ ಸಂಸ್ಥೆ ಅಧ್ಯಕ್ಷಬೆಟ್ಟೆಗೌಡ ಅವರು ರಾಜ್ಯ ತಂಡದ ಆಟಗಾರರೊಂದಿಗೆ ಪಂದ್ಯವನ್ನಾಡುವ ಮೂಲಕ ಆಟವನ್ನು ಸವಿದರು.