ದುಬೈ: ಇದೇ ಚೊಚ್ಚಲ ಬಾರಿಗೆ ಆಯೋಜನೆಯಲಾಗುತ್ತಿರುವ ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್)ನ ರಾಯಭಾರಿಯಾಗಿ ಟೀಂ ಇಂಡಿಯಾ ಸೀಮಿತ ಓವರ್‍ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನೇಮಕ ಗೊಂಡಿದ್ದಾರೆ.
ಸೋಮವಾರ ನಡೆದ ಖಾಸಗಿ ಸಮಾರಂಭದಲ್ಲಿ, ಪಂದ್ಯಾವಳಿಯ ಟಿಕೆಟ್‍ಗಳನ್ನು ಬಿಡುಗಡೆಗೊಳಿಸಿದ ಅವರು, ತಮ್ಮ ರಾಯಭಾರಿತ್ವ ಸೇವೆಗೆ ಚಾಲನೆ ನೀಡಿದರು. ಪಂದ್ಯಾವಳಿಯ ಆಯೋಜನೆ ಹೊಣೆಯನ್ನು ಹೊತ್ತಿರುವ ಗ್ರಾಂಡ್ ಮಿಡ್‍ವೆಸ್ಟ್ ಗ್ರೂಪ್ ಸಂಸ್ಥೆಗೂ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ರಾಯಭಾರಿ ಯಾಗಿ, ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದರು.