ಸಂಜಿತಾ, ರಮಣಗೆ ಚಿನ್ನ
ರಾಷ್ಟ್ರೀಯ ಹಿರಿಯರ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನ ಮೊದಲ ದಿನ ಸಂಜಿತಾ ಚಾನು ಹಾಗೂ ಕೊರಾಡಾ ರಮಣ ಚಿನ್ನದ ಗೌರವಕ್ಕೆ ಪಾತ್ರರಾಗಿದ್ದಾರೆ...
ಪಟಿಯಾಲಾ: ರಾಷ್ಟ್ರೀಯ ಹಿರಿಯರ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನ ಮೊದಲ ದಿನ ಸಂಜಿತಾ ಚಾನು ಹಾಗೂ ಕೊರಾಡಾ ರಮಣ ಚಿನ್ನದ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಂಜಿತಾ, ಸ್ನಾಚ್ನಲ್ಲಿ 78 ಕೆ.ಜಿ., ಕ್ಲೀನ್ ಆ್ಯಂಡ್ ಜೆರ್ಕ್ನಲ್ಲಿ 95 ಕೆ.ಜಿ.ಸೇರಿದಂತೆ ಒಟ್ಟು 173 ಕೆ.ಜಿ. ಭಾರ ಎತ್ತುವ ಮೂಲಕ ಅಗ್ರಸ್ಥಾನ ಪಡೆದರು. ಈ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಹಾಗೂ ಚಂದ್ರಿಕಾ ಕಂಚಿನ ಪದಕ ಪಡೆದರು. ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಕೊರಾಡ ರಮಣ, ಒಟ್ಟಾರೆಯಾಗಿ 251 ಕೆ.ಜಿ. ಭಾರ ಎತ್ತಿ ಚಿನ್ನದ ಗೌರವ ಪಡೆದರು. ಈ ವಿಭಾಗದಲ್ಲಿ ಜಾಮ್ಜಂಗ್ ದೇರು ಬೆಳ್ಳಿ ಪಡೆದರೆ, ಗುರು ರಾಜಾ ಕಂಚು ಗಳಿಸಿದರು.