ಶಾರ್ಜಾ: ಅಮೀರ್ ಅಮಾ್ಜ (4 ವಿಕೆಟ್) ಅವರ ಮಾರಕ ದಾಳಿಯ ನೆರವಿನಿಂದ ಆಫ್ಘಾನಿಸ್ತಾನ ತಂಡವು ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ 49 ರನ್‍ಗಳ ಗೆಲವು ಪಡೆಯಿತು. ಟಾಸ್‍ಗೆದ್ದ ಆಫ್ಘಾನಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 38.5 ಓವರ್‍ಗಳಲ್ಲಿ 131ಕ್ಕೆ ಆಲೌಟ್ ಆಯಿತು. ನಂತರ ಜಿಂಬಾಬ್ವೆ ತಂಡವನ್ನು 30.5 ಓವರ್‍ಗಳಲ್ಲಿ 82 ರನ್ ಗಳಿಗೆ ಆಲೌಟ್ ಮಾಡಿತು. ಅಫ್ಘಾನಿಸ್ತಾನ ತಂಡದ ಪರ ನೂರ್ ಅಲಿ (63) ಅರ್ಧಶತಕ ಮತ್ತು ಮೀರ್ ಅಮಾ್ಜ 17ಕ್ಕೆ 4 ಪರಿಣಾಮಕಾರಿ ಬೌಲಿಂಗ್ ಆಫ್ಘಾನಿಸ್ತಾನ ಜಯದಲ್ಲಿ ಪ್ರಮುಖ ಪಾತ್ರವಹಿಸಿತು. ಅಮೀರ್ ಅಮಾ್ಜ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.