ಗೋವಾ ಎಫ್ ಸಿ ವಿರುದ್ಧ ಕ್ರಮ?
ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯ ಫೆೈನಲ್ ಪಂದ್ಯದ ನಂತರ, ಟೂರ್ನಿಯ ಮೂವರು ರೆಫರಿಗಳ ಹಲ್ಲೆ ಮಾಡಿರುವ ಆರೋಪಕ್ಕೆ...
ಪಣಜಿ: ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯ ಫೆೈನಲ್ ಪಂದ್ಯದ ನಂತರ, ಟೂರ್ನಿಯ ಮೂವರು ರೆಫರಿಗಳ ಹಲ್ಲೆ ಮಾಡಿರುವ ಆರೋಪಕ್ಕೆ ಗುರಿಯಾ ಗಿರುವ ಗೋವಾ ತಂಡದ ಸಿಬ್ಬಂದಿ ಬಗ್ಗೆ ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್) ಮುಂದಿನ ವಾರ ನಿರ್ಧಾರ ಕೈಗೊಳ್ಳಲಿದೆ. ಕಳೆದ ಭಾನುವಾರ ನಡೆದಿದ್ದ ಐಎಸ್ಎಲ್ ಫೆೈನಲ್ನಲ್ಲಿ ಗೋವಾ ತಂಡವನ್ನು ಮಣಿಸಿದ್ದ ಚೆನ್ನೈಯಿನ್ ತಂಡ ಪ್ರಶಸ್ತಿ ಗೆದ್ದಿತ್ತು. ಸೋಲಿನ ಹತಾಶೆಯಲ್ಲಿ ಗೋವಾ ತಂಡದ ಸಿಬ್ಬಂದಿ ಜಪಾನ್ ಮೂಲದ 3 ರೆಫರಿಗಳ ಮೇಲೆ ಹಲ್ಲೆ ನಡೆಸಿದ್ದಾರೆಂದು ಪಂದ್ಯದ ಆಯುಕ್ತ ಎ.ಕೆ. ಮಮುಕೋಯಾ ಎಐಎಫ್ಎಫ್ ಗೆ ವರದಿ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.