ಚಿಕ್ಕರಂಗಪ್ಪ ಮುಡಿಗೆ ಡಬಲ್ ಕಿರೀಟ
ಬೆಂಗಳೂರಿನ ಭರವಸೆಯ ಗಾಲ್ಫ್ ಆಟಗಾರ ಎಸ್.ಚಿಕ್ಕರಂಗಪ್ಪ ಅವರಿಗೆ ಭಾನುವಾರ ಎರಡು ಯಶಸ್ಸು ಲಭಿಸಿದೆ. ವರ್ಷಾಂತ್ಯದ ಮೆಕ್ಲೊಯೆಡ ರಸ್ಸೆಲ್ ಟೂರ್ ಗಾಲ್ಫ್...
ಕೋಲ್ಕತಾ: ಬೆಂಗಳೂರಿನ ಭರವಸೆಯ ಗಾಲ್ಫ್ ಆಟಗಾರ ಎಸ್.ಚಿಕ್ಕರಂಗಪ್ಪ ಅವರಿಗೆ ಭಾನುವಾರ ಎರಡು ಯಶಸ್ಸು ಲಭಿಸಿದೆ. ವರ್ಷಾಂತ್ಯದ ಮೆಕ್ಲೊಯೆಡ ರಸ್ಸೆಲ್ ಟೂರ್ ಗಾಲ್ಫ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಶಸ್ತಿ ಗೆಲ್ಲುವುದರ ಜತೆಗೆ, ಪಿಜಿಟಿಐನ ರೊಲೆಕ್ಸ್ ವರ್ಷದ ಆಟಗಾರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಭಾನುವಾರ ನಡೆದ ನಾಲ್ಕನೇ ಸುತ್ತಿನ ಸ್ಪರ್ಧೆಯಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಎಸ್. ಚಿಕ್ಕರಂಗಪ್ಪ ಅಗ್ರಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಎತ್ತಿಹಿಡಿದರು. ಶನಿವಾರ ಸ್ಪರ್ಧೆ ಮುಕ್ತಾಯಗೊಂಡಾಗ ಚಿಕ್ಕರಂಗಪ್ಪ 207 ಅಂಕಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದರು. ನಂತರ ಅಂತಿಮ ದಿನ 69 ಅಂಕಗಳನ್ನು ಗಳಿಸಿದ ಚಿಕ್ಕ ಒಟ್ಟಾರೆಯಾಗಿ 276 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರು. ಆ ಮೂಲಕ ರು.22 ಲಕ್ಷ ಮೊತ್ತದ ಪ್ರಶಸ್ತಿ ಗೆದ್ದರು. ಇನ್ನು ಎರಡು ಮತ್ತು ಮೂರನೇ ದಿನದ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ಡುಕೊಂಡಿದ್ದ ಜ್ಯೋತಿ ರಾಂಧವ, ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫಲರಾದರು.