ತಿರುವನಂತಪುರ: ಪಂದ್ಯದ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಚೇತರಿಕೆ ಕಂಡ ಭಾರತ ತಂಡ ದಕ್ಷಿಣ ಏಷ್ಯಾ ಫುಟ್ಬಾಲ್ ಒಕ್ಕೂಟ (ಸ್ಯಾಫ್) ಚಾಂಪಿಯನ್‍ಶಿಪ್‍ನಲ್ಲಿ ಸೆಮಿಫೈನಲ್ ಸುತ್ತಿಗೆ ಪ್ರವೇಶ ಪಡೆದಿದೆ.
ಭಾನುವಾರ ತಿರುವನಂತಪುರ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ತನ್ನ ಪ್ರತಿಸ್ಪರ್ಧಿ ನೇಪಾಳ ವಿರುದ್ಧ 4-1 ಗೋಲುಗಳ ಅಂತರದ ಜಯ ಸಾಧಿಸಿತು. ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತ ಒಟ್ಟಾರೆಯಾಗಿ 6 ಅಂಕಗಳನ್ನು ಪಡೆದು ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದೆ.
ಭಾರತ ತಂಡದ ಪರ ರೊವ್ಲಿನ್ ಬೋರ್ಜಸ್ 26ನೇ ಹಾಗೂ ನಾಯಕ ಸುನೀಲ್ ಛೆಟ್ರಿ 68ನೇ ನಿಮಿಷದಲ್ಲಿ ಗೋಲು ಬಾರಿಸಿದರು. ನೇಪಾಳ ತಂಡದ ಪರ ಬಿಮಲ್ ಮಗರ್ 3ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪಂದ್ಯ ಆರಂಭವಾದ ಮೂರೇ ನಿಮಿಷದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ನೇಪಾಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.
ನೇಪಾಳದ ಬಿಮಲ್ ಮಗರ್ 3ನೇ ನಿಮಿಷದಲ್ಲಿ ಗೋಲು ದಾಖಲಿಸಿ, ಭಾರತ ತಂಡಕ್ಕೆ ಶಾಕ್ ನೀಡಿತು. ನಂತರ ಕ್ರಮೇಣವಾಗಿ ನಿಯಂತ್ರಣ ಸಾಧಿಸುತ್ತಾ ಬಂದ ಭಾರತ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು. ಪಂದ್ಯದ 26ನೇ ನಿಮಿಷದಲ್ಲಿ ರೊವ್ಲಿನ್ ಬೋರ್ಜಸ್ ಗೋಲು ದಾಖಲಿಸಿ ತಂಡ ಸಮಬಲ ಸಾಧಿಸಲು ನೆರವಾದರು. ಆ ಮೂಲಕ ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದವು. ಇನ್ನು ದ್ವಿತೀಯಾರ್ಧದಲ್ಲಿ ನಾಯಕ ಸುನೀಲ್ ಛೆಟ್ರಿ 68ನೇ ನಿಮಿಷದಲ್ಲಿ ಹಾಗೂ ಚಂಗ್ಟೆ ಲಲಿಯಾಂಜುವಾಲಾ 81, 90ನೇ ನಿಮಿ-ಷ-ದಲ್ಲಿ ಗೋಲು ದಾಖಲಿಸಿ ತಂಡ ಅರ್ಹ ಜಯ ಸಾಧಿಸುವಂತೆ ನೋಡಿಕೊಂಡರು.