ಸಂಗ್ರಹ ಚಿತ್ರ 
ಕ್ರೀಡೆ

ಯುನೈಟೆಡ್ ತಂಡಕ್ಕೆ ರೋಚಕ ಜಯ

ಪಂದ್ಯದ ಆರಂಭದಲ್ಲಿ ಸಾಧಿಸಿದ ಮುನ್ನಡೆಯನ್ನು ಅಂತಿಮ ಹಂತದವರೆಗೂ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಸೌತ್ ಯುನೈಟೆಡ್...

ಬೆಂಗಳೂರು: ಪಂದ್ಯದ ಆರಂಭದಲ್ಲಿ ಸಾಧಿಸಿದ ಮುನ್ನಡೆಯನ್ನು ಅಂತಿಮ ಹಂತದವರೆಗೂ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಸೌತ್ ಯುನೈಟೆಡ್, ಬಿಡಿಎಫ್ ಎ ಆಶ್ರಯದ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಎಎಸ್‍ಸಿ ಮತ್ತು ಸೆಂಟರ್ ತಂಡದ ಎದುರು ರೋಚಕ ಜಯ ಸಾಧಿಸಿತು. 
ಬೆಂಗಳೂರು ಜಿಲ್ಲಾ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸೌಥ್ ಯುನೈಟೆಡ್ ತಂಡ 3-2 ಗೋಲುಗಳ ಅಂತರದಲ್ಲಿ ಎಎಸ್‍ಸಿ ವಿರುದ್ಧ ಜಯಶಾಲಿಯಾಯಿತು. ಸೌತ್ ಯುನೈಟೆಡ್ ಪರ ಸೊಲೈ ಮಲೈ (26 ನಿ.), ಮಣಿವಣನ್ 28ನೇ ಮತ್ತು ಮಗೇಶ್ 51ನೇ ನಿಮಿಷದಲ್ಲಿ ಒಂದೊಂದು ಗೋಲು ದಾಖಲಿಸಿದರು. 
ಎಎಸ್‍ಸಿ ತಂಡದ ಪರ ಜೋತಿನ್ ಸಿಂಗ್ 60ನೇ ಮತ್ತು ದೀಪಕ್ 71ನೇ ನಿಮಿಷದಲ್ಲಿ ಗೋಲು ಹೊಡೆದರು. ಪಂದ್ಯದ ಮೊದಲಾರ್ಧದಲ್ಲಿಯೇ ಎಎಸ್ ಸಿ ತಂಡದ ಮೇಲೆ ಭಾರೀ ಒತ್ತಡ ಹೇರಿ 2-0 ಅಂತರದ ಮುನ್ನಡೆ ಸಾಧಿಸಿತಲ್ಲದೆ, ನಂತರ ದ್ವಿತೀಯಾರ್ಧದ ಆರಂಭದಲ್ಲಿ ತನ್ನ ಮುನ್ನಡೆ ಯನ್ನು 3-0ಗೆ ಹೆಚ್ಚಿಸಿಕೊಂಡಿತು. 
ಈ ಹಂತದಲ್ಲಿ ಉತ್ತಮ ಹೋರಾಟಕಾರಿ ಪ್ರದರ್ಶನ ನೀಡಿದ ಎಎಸ್‍ಸಿ ತಂಡ, ಯುನೈಟೆಡ್‍ಗೆ ಸವಾಲು ನೀಡುವ ಸೂಚನೆ ನೀಡಿತಾದರೂ, ಅಂತಿಮ ಕ್ಷಣಗಳಲ್ಲಿ ಮುಗ್ಗರಿಸಿತು. 
ಈಗಲ್ಸ್ ಗೆ ವಿಜಯ: ಇನ್ನು ಮಂಗಳವಾರ ನಡೆದ `ಎ` ಡಿವಿಷನ್ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ತಂಡ 3-0 ಗೋಲುಗಳ ಅಂತರದಲ್ಲಿ ಎಲ್‍ಆರ್‍ಡಿಇ ವಿರುದ್ಧ ಜಯ ಪಡೆಯಿತು. ಸಂಪೂರ್ಣ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಈಗಲ್ಸ್ ತಂಡದ ಪರ ಅರುಣ್‍ಕುಮಾರ್ (27 ನಿ.), ಸತೀಶ್ ಹಾಗೂ ದಿನೇಶ್ 61 ಹಾಗೂ 80ನೇನಿಮಿಷದಲ್ಲಿ ಗೋಲು ಬಾರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!