ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದೆಹಲಿ ನಾಯಕ ಗೌತಮ್ ಗಂಭೀರ್ ಪಂದ್ಯ ಮುಕ್ತಾಯದ ನಂತರ ಧೋನಿಯ ಕೈ ಕುಲುಕಿ ವಿಶ್ ಮಾಡದೆ ಕ್ರೀಡಾಸ್ಫೂರ್ತಿಗೆ ಧಕ್ಕೆ ತಂದರೆಂದು ಮಾಧ್ಯ ಮಗಳು ವರದಿ ಮಾಡಿದ್ದಕ್ಕೆ ಪ್ರತಿಯಾಗಿ ಸಾಕ್ಷ್ಯ ಒದಗಿಸಿರುವ ಗಂಭೀರ್, ``ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ನಡುವಿನ ಆಪ್ತ ಭೇಟಿಗಿಂತ ಇದನ್ನು ಹೆಚ್ಚಿಗೆ ಬಿಂಬಿಸಲಾಯಿತು. ವಿದ್ಯುನ್ಮಾನ ಮಾಧ್ಯಮ ಸ್ನೇಹಿತರಿಗೆ ಈ ಚಿತ್ರ ಎಲ್ಲವನ್ನೂ ಹೇಳುತ್ತದೆ'' ಎಂದೇ ಭಾವಿಸಿದ್ದೇನೆ ಎಂದರು.