ಕ್ರೀಡೆ

ಭಾರತಕ್ಕೆ ಮಾಲ್ಡೀವ್ಸ್ ಸವಾಲು

Srinivas Rao BV

ತಿರುವನಮತಪುರಂ: ಅತ್ಯುತ್ತಮ ಲಯದಲ್ಲಿರುವ ಭಾರತ ಫುಟ್ಬಾಲ್ ತಂಡ ದಕ್ಷಿಣ ಏಷ್ಯಾ ಫುಟ್ಬಾಲ್ ಒಕ್ಕೂಟ (ಸ್ಯಾಫ್) ಚಾಂಪಿಯನ್‍ಶಿನ್‍ನ  ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಲು ಸಂಪೂರ್ಣ ಸಜ್ಜಾಗಿದೆ.
ಗುರುವಾರ ಇಲ್ಲಿನ ತ್ರಿವೆಂಡ್ರಂ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮಾಲ್ಡೀವ್ಸ್ ವಿರುದ್ಧ ಸೆಣಸಲಿದೆ. ಈವರೆಗೂ 6 ಬಾರಿ ಚಾಂಪಿಯನ್ ಆಗಿ ಪ್ರಾಬಲ್ಯ ಮೆರೆದಿರುವ ಭಾರತ, ಮೂರು ಬಾರಿ ರನ್ನರ್‍ಅಪ್ ಎನಿಸಿದೆ. ಇದೀಗ ಏಳನೇ ಪ್ರಶಸ್ತಿ ಎತ್ತಿ ಹಿಡಿಯುವ ಗುರಿ ಹೊಂದಿದೆ. ಭಾರತ ತಂಡ `ಎ'ಗುಂಪಿನ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 2-0 ಹಾಗೂ ನೇಪಾಳ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಮತ್ತೊಂದೆಡೆ ಮಾಲ್ಡೀವ್ಸ್ ತಂಡ `ಬಿ' ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2ರಲ್ಲಿ ಜಯ ಪಡೆದರೆ, ಒಂದರಲ್ಲಿ ಸೋಲನುಭವಿಸಿ ಎರಡನೇ ಸ್ಥಾನ ಪಡೆದಿದೆ. ಭೂತಾನ್ ಹಾಗೂ ಬಾಂಗ್ಲಾದೇಶ ವಿರುದಟಛಿ ತಲಾ 3-೧ ಗೋಲುಗಳಿಂದ ಗೆದ್ದಿದ್ದ ಮಾಲ್ಡೀವ್ಸ್ ನಂತರ ಅಂತಿಮ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 1-4ರಿಂದ ಸೋಲನುಭವಿಸಿತ್ತು. ಭಾರತ ತಂಡದ ಪರ ಪ್ರಮುಖ ಸ್ಟ್ರೈಕರ್ ರಾಬಿನ್ ಸಿಂಗ್ ಮಂಡಿ ನೋವಿನಿಂದಾಗಿ ಟೂರ್ನಿಯಿಂದ ಹೊರಗುಳಿದಿರುವುದುತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

SCROLL FOR NEXT