ತಿರುವನಂತಪುರ: ಮಹಾರಾಷ್ಟ್ರದ ನೆಟ್‍ಬಾಲ್ ಆಟಗಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ದುರ್ಘಟನೆ 35ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಡೆದಿದೆ.
ಸೋಮವಾರ ಮಹಾರಾಷ್ಟ್ರ ತಂಡದ ಆಟಗಾರರು ಅಭ್ಯಾಸ ನಡೆಸಿ ತಮ್ಮ ಕೊಠಡಿಗೆ ಸಾಗುವಾಗ 21 ವರ್ಷದ ಮಯೂರೇಶ್ ಪವಾರ್ ಎಂಬ ಆಟಗಾರ ಮೃತಪಟ್ಟಿದ್ದಾರೆ.
ಮಯೂರೇಶ್ ಕೊಠಡಿಗೆ ತೆರಳುವಾಗ ಕುಸಿದು ಬಿದ್ದರು. ನಂತರ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಂತರ ವೈದ್ಯರು ಹೃದಯಾಘಾತ ದಿಂದ ಆತ ಮೃತ ಪಟ್ಟಿರುವುದಾಗಿ ಧೃಡಪಡಿಸಿ ದರು ಎಂದು ಕ್ರೀಡಾ ಕೂಟದ ಸಂಘಟನಾಕಾರರು ತಿಳಿಸಿದ್ದಾರೆ.