ಮುಂಬೈ: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಸುತ್ತು ಈಗ ಅಂತಿಮ ಘಟ್ಟಕ್ಕೆ ಬಂದಿದೆ. ಶುಕ್ರವಾರದಿಂದ ಲೀಗ್ ಹಂತದ ಕೊನೆಯ ಸಮರ
ಆರಂಭವಾಗಲಿದೆ. ಒಟ್ಟು ಮೂರು ಗುಂಪುಗಳ ಪೈಕಿ ಸದ್ಯ `ಎ' ಗುಂಪಿನಿಂದ ಕರ್ನಾಟಕ, `ಬಿ' ಗುಂಪಿನಿಂದ ದೆಹಲಿ ಹಾಗೂ `ಸಿ' ಗುಂಪಿನಿಂದ ಅಸ್ಸಾಂ ತಂಡಗಳು
ಮಾತ್ರ ಕ್ವಾರ್ಟರ್ ಫೈನಲ್‍ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿವೆ. `ಎ' ಮತ್ತು `ಬಿ' ಗುಂಪಿನ ಅಗ್ರ ಮೂರು ಹಾಗೂ `ಸಿ' ಗುಂಪಿನಿಂದ ಅಗ್ರ ಎರಡು ತಂಡಗಳು ಮÁತ್ರ ನಾಕೌಟ್‍ಗೆ ಪ್ರವೇಶ ಗಿಟ್ಟಿಸಲಿವೆ. ಹಾಗಾಗಿ, ಇನ್ನೂ ಐದು ಕ್ವಾರ್ಟರ್ ಫೈನಲ್ ಸ್ಥಾನಗಳು ಖಚಿತವಾಗಬೇಕಿದ್ದು, ಅದಕ್ಕಾಗಿ ಸ್ಪರ್ಧಾ ಕಣದಲ್ಲಿರುವ ಇನ್ನಿತರ ತಂಡಗಳು ಈ ಸೌಭಾಗ್ಯ ತಮ್ಮದಾಗಿಸಿಕೊಳ್ಳಲು ತಮ್ಮ ಕೊನೆಯ ಲೀಗ್ ಸಮರಕ್ಕೆ ಸಜ್ಜಾಗಿ ನಿಂತಿವೆ. `ಎ' ಗುಂಪಿನ ವಿಷಯಕ್ಕೆ ಬಂದರೆ, ಹಾಲಿ ಚಾಂಪಿಯನ್ ಹೆಗ್ಗಳಿಕೆ ಹೊಂದಿರುವ ಕರ್ನಾಟಕ, ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 40 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳ
ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಕರ್ನಾಟಕ ಈ ವರೆಗೆ ಆಡಿರುವ 7 ಪಂದ್ಯಗಳಲ್ಲಿ 4 ಜಯ ಮತ್ತು 3 ಡ್ರಾ ಫಲಿತಾಂಶದೊಂದಿಗೆ ಒಟ್ಟು 32 ಅಂಕ ಕಲೆಹಾಕಿ 9 ತಂಡಗಳ ತನ್ನ ಗುಂಪು ಸೆಣಸಿನಲ್ಲಿ ಅಗ್ರಸ್ಥಾನ ಹೊಂದಿದೆ. ಆದರೆ, ರಣಜಿ ಟ್ರೋಪಿs ಇತಿಹಾಸದಲ್ಲಿ ವಿನೂತನ ಅಧ್ಯಾಯ ಸೃಷ್ಟಿ ಮಾಡಿರುವ ಮುಂಬೈ ಸ್ಥಿತಿ ಈ ಬಾರಿ ಶೋಚನೀಯವಾಗಿದೆ.
ಮುಂಬೈ ಸಹ 7 ಪಂದ್ಯಗಳನ್ನಾಡಿದ್ದು ಕೇವಲ 2 ಜಯ, 2 ಸೋಲು ಮತ್ತು 3 ಡ್ರಾಗಳೊಂದಿಗೆ 17 ಅಂಕ ಕಲೆಹಾಕಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮುಂಬೈ ಭರ್ಜರಿ ಗೆಲವು ದಾಖಲಿಸಿ ಬೋನಸ್ ಅಂಕ ಸೇರಿದಂತೆ ಒಟ್ಟು 7 ಅಂಕಗಳನ್ನು ಪಡೆದರೂ ಸಹ ನಾಕೌಟ್‍ಗೆ ಪ್ರವೇಶಿಸುವುದು ಕಷ್ಟ. ಆಗ ಮುಂಬೈ ತಂಡ ತನಗಿಂತಲೂ ಮುಂಚೂಣಿಯಲ್ಲಿರುವ ತಮಿಳುನಾಡು (2ನೇ ಸ್ಥಾನ) ಮತ್ತು ಬರೋಡಾ (3ನೇ ಸ್ಥಾನ) ತಂಡಗಳು ಕೊನೆಯ ಲೀಗ್‍ನಲ್ಲಿ ಪಡೆಯುವ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಒಂದು ವೇಳೆ ಮುಂಬೈ, ಇನಿಂಗ್ಸ್ ಹಿನ್ನಡೆಯೊಂದಿಗೆ ಡ್ರಾ ಫಲಿತಾಂಶಕ್ಕೆ ತೃಪ್ತಿಗೊಂಡರೆ, ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆ ಬಹುತೇಕ ಕಮರಿ ಹೋಗಲಿದೆ. ಹಾಗಾಗಿ, ಕರ್ನಾಟಕ ವಿರುದಟಛಿದ ಪೈಪೋಟಿ ಮುಂಬೈ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಇನ್ನು ಕರ್ನಾಟಕ ತಂಡ ಮಾತ್ರ ಹಾಲಿ ಚಾಂಪಿಯನ್ ಖ್ಯಾತಿಗೆ ತಕ್ಕ ಪ್ರದರ್ಶನ ಮುಂದುವರಿಸಿದೆ. ಸೋಲರಿಯದ ತಂಡವಾಗಿ ಮುನ್ನುಗ್ಗುತ್ತಿರುವ ಕರ್ನಾಟಕ, ಶುರುವಿನಲ್ಲೇ ಸತತ ನಾಲ್ಕು ಗೆಲವು ದಾಖಲಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.
ವಿನಯ್ ಕುಮಾ ರ್ ನಾಯಕತ್ವದಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತಿರುವ ಹಾಲಿ ಚಾಂಪಿಯನ್ನರು ಪ್ರಶಸ್ತಿ ತಮ್ಮ ಬಳಿಯೇ ಉಳಿಸಿಕೊಳ್ಳುವ ದಿಕ್ಕಿನತ್ತ ಯಶಸ್ವಿಯಾಗಿ ಹೆಜ್ಜೆ ಹಾಕುತ್ತಿರುವುದು ಅವರ ಆತ್ಮವಿಶ್ವಾಸ ಹೆಚ್ಚಿಸಿದೆ. ಉತ್ತರಪ್ರದೇಶ ವಿರುದಟಛಿ ಬೆಂಗಳೂರಿನಲ್ಲಿ ನಡೆದಿದ್ದ ಕಳೆಯ ಪಂದ್ಯದಲ್ಲಿ ಆರಂಭಿಕ ಲೋಕೇಶ್ ರಾಹುಲ್ (337ರನ್) ಅಭೂತಪೂರ್ವ ತ್ರಿಶತಕ ಸಿಡಿಸಿ ಹಲವು ದಾಖಲೆಗಳಿಗೆ ಭಾಜನರಾಗಿದ್ದರು. ತಂಡದ ದೊಡ್ಡ ಬ್ಯಾಟಿಂಗ್ ಶಕ್ತಿಯಾಗಿರುವ ಕೆ.ಎಲ್. ರಾಹುಲ್ ಮೇಲೆ ತಂಡಕ್ಕೆ ಅಪಾರವಾದ ನಂಬಿಕೆ ಇದೆ.
ಉಳಿದೆಲ್ಲ ಆಟಗಾರರೂ ಕೂಡ ಪರಿಣಾಮಕಾರಿ ಸಾಮಥ್ರ್ಯ ಮೆರೆಯುತ್ತಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕರ್ನಾಟಕ ಸದೃಢವಾಗಿ ಮುನ್ನಡೆಯುತ್ತಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ. ಮತ್ತೊಂದೆಡೆ ಅಸ್ಥಿರ ಪ್ರದರ್ಶನ ನೀಡುತ್ತಿರುವ ಮುಂಬೈ ಆಟಗಾರರಿಗೆ ಕರ್ನಾಟಕದಿಂದಲೂ ಕಠಿಣ ಸವಾಲು ಎದುರಾಗುವುದರಲ್ಲಿ ಅಚ್ಚರಿಯಿಲ್ಲ. ಈ ಸಾಲಿನ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲೇ ದುರ್ಬಲ ಜಮ್ಮು-ಕಾಶ್ಮೀರ ಎದುರು ಅನುಭವಿಸಿದ ಹೀನಾಯ ಸೋಲು, ಮುಂಬೈಗೆ ಮಾನಸಿಕ ಆಘಾತ ಉಂಟುಮಾಡಿದೆ. ಇದರಿಂದ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಂಡಿರುವ ಮುಂಬೈ, ಅಂತಿಮ ಲೀಗ್‍ನಲ್ಲಿ ಕರ್ನಾಟಕದ ಮುಂದೆ ಗೆಲ್ಲದೇ ವಿಧಿ ಇಲ್ಲ.