ಮೂರನೇ ಅಂಪೈರ್ (ಸಂಗ್ರಹ ಚಿತ್ರ) 
ಕ್ರೀಡೆ

ಮೂರನೇ ಅಂಪೈರ್‍ನ ಮಹತ್ವ

ಮೊದಲೇ ಹೇಳಿದ ಹಾಗೆ 90ರ ದಶಕ ಕ್ರಿಕೆಟ್‍ನ ಹಣೆಬರಹವನ್ನೇ ಬದಲಾಯಿಸಿದ ಕಾಲಾವಧಿ. 1992ರ ವಿಶ್ವಕಪ್ ಅದಕ್ಕೆ ನಾಂದಿ ಹಾಡಿತಷ್ಟೇ.

ಅಲ್ಲಿಂದ ಕ್ರಿಕೆಟ್‍ನ ಚೆಲುವು, ಘಮಲು ಎಲ್ಲವೂ ಬದಲಾಗುತ್ತಾ ಸಾಗಿದವು. ಇದರಲ್ಲಿ ಪ್ರಮುಖವಾಗಿದ್ದು ಮೂರನೇ ಅಂಪೈರ್ ವ್ಯವಸ್ಥೆ ಅಳವಡಿಕೆ. ಮೈದಾನದಲ್ಲಿರುವ ಇಬ್ಬರು ಅಂಪೈರ್‍ಗಳು ಕೈಗೊಳ್ಳಲಾಗದ ಕೆಲವೊಂದು ಗೊಂದಲಮಯವಾದ ನಿರ್ಣಯಗಳು, ವಿವಾದಾತ್ಮಕ ತೀರ್ಪುಗಳನ್ನು ಕರಾರುವಾಕ್ಕಾಗಿ ನೀಡಲು 3ನೇ ಅಂಪೈರ್ ವ್ಯವಸ್ಥೆ ಜಾರಿಗೆ ತರಲಾಯಿತು. ಮೂರನೇ ಅಂಪೈರ್‍ಗಳ ಸಹಾಯಕ್ಕಾಗಿ ಇಬ್ಬರು ಸಹಾಯಕರನ್ನು ನೇಮಿಸಲಾಯಿತು. ಇವರನ್ನು ವಿಡಿಯೋ ಸ್ಟ್ರೀಮರ್ಸ್ ಎಂದು ಕರೆಯುತ್ತಾರೆ.

ಮೈದಾನದ ಪಿಚ್‍ನ ಎರಡೂ ತುದಿಗಳನ್ನು ಕೇಂದ್ರೀಕರಿಸಿ, ವಿವಿಧ ಕೋನಗಳಿಂದ ನಾಲ್ಕು ಕ್ಯಾಮೆರಾಗಳನ್ನು ಸ್ಥಾಪಿಸಲಾಗುತ್ತದೆ. ಇವು, ಬೌಂಡರಿ ಲೈನ್‍ನ ಆಚೆಯಿಂದ ಕಾರ್ಯ ನಿರ್ವಹಿಸುತ್ತವೆ. ಈ ಕ್ಯಾಮೆರಾಗಳಿಂದ ಬರುವ ಔಟ್‍ಪುಟ್ ನೇರವಾಗಿ ವಿಡಿಯೋ ಸ್ಟ್ರೀಮರ್ಸ್‍ಗಳ ಕಂಪ್ಯೂಟರ್ ಹಾಗೂ ಸರ್ವರ್‍ಗಳನ್ನು ಸೇರುತ್ತವೆ. ಹಾಗೊಂದು ವೇಳೆ, ಗೊಂದಲಮಯ ರನೌಟ್, ಸ್ಟಂಪ್‍ಔಟ್, ನೋ ಬಾಲ್ ಘಟನೆ ಉದ್ಭವವಾದಾಗ, ಮೂರನೇ ಅಂಪೈರ್‍ನ ಅಕ್ಕಪಕ್ಕದಲ್ಲಿ ಕೂಡುವ ವಿಡಿಯೋ ಸ್ಟ್ರೀಮರ್‍ಗಳು ಪಿಚ್ ಕೇಂದ್ರೀಕೃತ ಕ್ಯಾಮೆರಾಗಳ ಔಟ್ ಪುಟ್ ಅನ್ನು 3ನೇ ಆಂಪೈರ್ ಗೆ ತೋರಿಸುತ್ತಾರೆ. ಇದರಿಂದ, 3ನೇ ಅಂಪೈರ್ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT