ಕ್ರೀಡೆ

ಸ್ಲೆಡ್ಜಿಂಗ್ ಮಾಡಿದ್ರೆ ಒಂದು ಪಂದ್ಯ ನಿಷೇಧ

Vishwanath S

ಮೆಲ್ಬರ್ನ್: ವಿಶ್ವಕಪ್ ಟೂರ್ನಿಯಲ್ಲಿ ಆಟಗಾರರ ವರ್ತನೆಯನ್ನು ನಿಯಂತ್ರಿಸುವ ಮೂಲಕ ಜಂಟಲ್‍ಮನ್ ಗೇಮ್ ಅನ್ನು ವಿವಾದ ಮುಕ್ತವಾಗಿಸಲು ಅಂತಾರಾಷ್ಟ್ರಿಯ ಕ್ರಿಕೆಟ್ ಮಂಡಳಿ ಕಠಿಣ ನಿರ್ಧಾರಕ್ಕೆ ಬಂದಿದೆ.

ಟೂರ್ನಿಯಲ್ಲಿ ಸ್ಲೆಡ್ಜಿಂಗ್ ಮಾಡುವ ಆಟಗಾರರಿಗೆ ಒಂದು ಪಂದ್ಯದ ನಿಷೇಧ ಹೇರುವುದಾಗಿ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿದ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್‍ಸನ್, ಐಸಿಸಿ ಆಟಗಾರರ ವರ್ತನೆಯ ನಿಯಮದಲ್ಲಿ ಉಲ್ಲಂಘನೆಯಾಗಿ ತಪ್ಪಿತಸ್ಥ ಎಂದು ಕಂಡುಬಂದರೆ ಆ ಆಟಗಾರನಿಗೆ ಒಂದು ಪಂದ್ಯದ ನಿಷೇಧದ ಶಿಕ್ಷೆ ನೀಡುವುದಾಗಿ ತಿಳಿಸಿದ್ದಾರೆ.

ಮೊದಲ ಬಾರಿಗೆ ಸ್ಲೆಡ್ಜಿಂಗ್ ಮಾಡಿದರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಮತ್ತೆ ಅದೇ ತಪ್ಪು ಮರುಗಳಿಸಿದರೆ ಪಂದ್ಯಗಳ ನಿಷೇಧದ ಶಿಕ್ಷೆ  ನೀಡಲಾಗುವುದು ಎಂದಿದ್ದಾರೆ.

SCROLL FOR NEXT