ಉದ್ಘಾಟನಾ ಸಮಾರಂಭ 
ಕ್ರೀಡೆ

ಐಸಿಸಿ ವಿಶ್ವಕಪ್ ಕ್ರಿಕೆಟ್ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ

11ನೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಮಹಾಸಮರದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಅದ್ದೂರಿಯಾಗಿ...

ನವದೆಹಲಿ: 11ನೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಮಹಾಸಮರದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಮಹಾಸಮರದಲ್ಲಿ 11 ರಾಷ್ಟ್ರಗಳು ಭಾಗವಹಿಸುತ್ತಿದ್ದು ಶನಿವಾರ ವಿಶ್ವಕಪ್‌ನ ಮೊದಲ ಪಂದ್ಯ ನಡೆಯಲಿದೆ.

ಅಪರಾಹ್ನ 2.00 ಮತ್ತು 5.00 ಗಂಟೆಗೆ ಸರಿಯಾಗಿ ನ್ಯೂಜಿಲ್ಯಾಂಡ್‌ನ ಕ್ರಿಸ್ಟ್ ಚರ್ಚ್ ಮಚ್ಚು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ  ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.

ನ್ಯೂಜಿಲ್ಯಾಂಡ್‌ನ ಕ್ರಿಸ್ಟ್‌ಚರ್ಚ್‌ನಲ್ಲಿರುವ ನಾರ್ತ್ ಹಗ್‌ಲೇ ಪಾರ್ಕ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.

ನ್ಯೂಜಿಲ್ಯಾಂಡ್‌ನ ಫೇವರಿಟ್ ಕ್ರಿಕೆಟಿಗರಾದ ಸರ್ ರಿಚಾರ್ಡ್ ಹಾಡ್ಲೀ, ಸ್ಟೀಫನ್ ಫ್ಲೆಮಿಂಗ್ ಮತ್ತು ಬ್ರೆನ್‌ಡನ್ ಮ್ಯಾಕೆಲ್ಲಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖ ವ್ಯಕ್ತಿಗಳಾಗಿದ್ದಾರೆ.

ಅಲ್ಲಿನ ಸ್ಥಳೀಯ ಸಮಯ ಸಂಜೆ 6.30ಕ್ಕೆ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಲಿದ್ದು ಸ್ಥಳೀಯ ಕ್ರಿಕೆಟ್ ತಂಡಗಳು, ನ್ಯೂಜಿಲ್ಯಾಂಡ್ ಕ್ರಿಕೆಟ್ ಟೀಂ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ.

ಸಂಗೀತ ಮನರಂಜನಾ ಕಾರ್ಯಕ್ರಮಗಳಿಂದ ಕೂಡಿದ ಈ ಸಮಾರಂಭದಲ್ಲಿ ಪಟಾಕಿ ಸಿಡಿಸಿ ಜನ ವಿಶ್ವಕಪ್ ಪಂದ್ಯವನ್ನು ಸ್ವಾಗತಿಸಲಿದ್ದಾರೆ. ರಾತ್ರಿ 9.00 ಗಂಟೆಯ ವೇಳೆಗೆ ಉದ್ಘಾಟನಾ ಕಾರ್ಯಕ್ರಮ ಮುಕ್ತಾಯವಾಗಲಿದೆ.


ಮೆರ್ಲ್ಬರ್ನ್‌ನ ಸಿಡ್ನಿ ಮೇಯರ್ ಮ್ಯೂಸಿಕ್ ಬಾಲ್,ಲಿನ್ಲಿತ್‌ಹೋ ಏವ್ ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿಶ್ವಕಪ್ ಪಂದ್ಯಾಟವನ್ನಾಡಿದ ಖ್ಯಾತನಾಮರು ವೇದಿಕೆಯನ್ನಲಂಕರಿಸಲಿದ್ದು, ನೃತ್ಯ ಸಂಗೀತ ಮನರಂಜನಾ ಕಾರ್ಯಕ್ರಮಗಳಿಂದ ವಿಶ್ವಕಪ್ ಪಂದ್ಯಾಟದ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿಕೊಳ್ಳಲಿದೆ.

ಆಸ್ಟ್ರೇಲಿಯಾದ ಆರ್ ಆ್ಯಂಡ್ ಬಿ ಮತ್ತು ಪಾಪ್ ಗಾಯಕಿ ಜೆಸ್ಸಿಕಾ ಹಿಲ್ಡಾ ಮೊಬಾಯ್, ಗಾಯಕಿ ಟೀನಾ ಅರೇನಾ, ನಥೇನಿಯಲ್ ಮತ್ತು ಡಾರ್ಯಲ್ ಬ್ರೇತ್‌ವೇಟ್ ಮೊದಲಾದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
 



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ