ಕ್ರೀಡೆ

ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸೀಸ್‌ಗೆ ಭರ್ಜರಿ ಜಯ

ಮೆಲ್ಬೋರ್ನ್: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ದಿನದ ಎರಡನೇ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧ ಶನಿವಾರ 111 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

ಆಸ್ಟ್ರೇಲಿಯಾದ ಎಂಸಿಜಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರು ಬ್ಯಾಟಿಂಗ್ ಪಡೆದುಕೊಂಡ ಆಸೀಸ್ ತಂಡ, ಇಂಗ್ಲೆಂಡ್ ವಿರುದ್ಧ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 342ರನ್ ಕಲೆಹಾಕಿತು.

ಆಸೀಸ್‌ನ 343 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 231ಕ್ಕೆ ಆಲೌಟ್ ಆಗುವ ಮೂಲಕ 111 ರನ್‌ಗಳ ಅಂತರದಲ್ಲಿ ಸೋಲನ್ನಪ್ಪಿಕೊಂಡಿತ್ತು.

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಆರನ್ ಫಿಂಚ್(135) ಅವರ ಆಕರ್ಷಕ ಶತಕ ಮತ್ತು ಮ್ಯಾಕ್ಸ್‌ವೆಲ್ ಅವರ ಅರ್ಧಶಕತ ಆಸೀಸ್ ಭರ್ಜರಿ ಗೆಲುವಿಗೆ ಸಹಕಾರಿಯಾಯಿತು. ವಾರ್ನರ್‌ 22 ,ವಾಟ್ಸನ್‌ 0, ಸ್ಮಿತ್‌ 5 ,ನಾಯಕ ಬೈಲಿ 55 ರನ್‌ಗಳಿಸಿ ಔಟಾದರು. ಮ್ಯಾಕ್ಸ್‌ವೆಲ್‌ 40ಎಸೆತಗಳಲ್ಲಿ 66 ಮತ್ತು ಮಾರ್ಶ್‌ 23 ,ಹ್ಯಾಡಿನ್‌ 14 ಎಸೆತಗಳಲ್ಲಿ 31 ರನ್‌ಗಳಿಸಿದರು.

ಇನ್ನು ಇಂಗ್ಲೆಂಡ್‌ 44 ಕ್ಕೆ 4 ವಿಕೆಟ್‌ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ  ವೇಳೆ ಬ್ಯಾಟಿಂಗ್‌ಗಿಳಿದ ಜೇಮ್ಸ್‌ ಟಯ್ಲರ್‌(98) ಭರ್ಜರಿ ಆಟವಾಡಿದರೂ ಆಸ್ಟ್ರೇಲಿಯಾದ ಬೃಹತ್‌ ಮೊತ್ತದ ಗುರಿ ತಲುಪುವುದು ಅಸಾಧ್ಯವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ