ಬೆಂಗಳೂರು: ವಿಶ್ವಕಪ್ ಜ್ವರ ವಿಶ್ವದೆಲ್ಲೆಡೆ ಹೆಚ್ಚಿರುವ ಸಂದರ್ಭದಲ್ಲೇ ಬೆಂಗಳೂರಲ್ಲಿ ಐಪಿಎಲ್ ೮ ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಸೋಮವಾರ ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 78 ಭಾರತೀಯ ಆಟಗಾರರ 44 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 122 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಹೊಸ ತಂಡದತ್ತ ಡೆಲ್ಲಿ: ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದೇ ನಿರಾಸೆ ಅನುತಂಡ ಸಹ ಸಾಗಿದ್ದು, 11 ಆಟಗಾರರನ್ನು ಕೈ ಬಿಟ್ಟು ಮತ್ತೆ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಆಯ್ಕೆಯತ್ತ ಯೋಜನೆ ರೂಪಿಸಿದೆ.
ಮುಂಬೈ ಇಂಡಿಯನ್ಸ್ ತಂಡವೂ ಸಹ ವೇಗಿ ಜಹೀರ್ ಖಾನ್ ಹಾಗೂ ಆಸೀಸ್ನ ಮೈಕಲ್ ಹಸ್ಸಿ ಸೇರಿದಂತೆ 10 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಇನ್ನು ಹಾಲಿಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ತಾನ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಕಂಡ ಆಟಗಾರರನ್ನು ಉಳಿಸಿಕೊಂಡಿದೆ.
6 ಆಟಗಾರರು ವಿನಿಮಯ: ಆಟಗಾರರ ವಿನಿಮಯ ಪ್ರಕ್ರಿಯೆಯಲ್ಲಿ ಒಟ್ಟು 6 ಆಟಗಾರರು ಒಂದು ತಂಡದಿಂದ ಮತ್ತೊಂದು ತಂಡಕ್ಕೆ ರವಾನೆಯಾಗಿದಾದಾರೆ.
ರಾಜಸ್ಥಾನ ತಂಡದಲ್ಲಿದ್ದ ಇಕ್ಬಾವ್ ಅಬ್ದುಲ್ಲಾ ಆರ್ಸಿಬಿಗೆ, ಕೋಲ್ಕತ್ತಾ ನೈಟ್ ರೈಡರ್ಸ್ನ ಮನ್ವಿಂದರ್ ಬಿಸ್ಲಾ ಆರ್ ಸಿಬಿಗೆ, ರಾಜಸ್ಥಾನ ರಾಯಲ್ಸ್ ನಿಂದ ಉನ್ಮುಕ್ತ್ ಚಂದ್ ಮುಂಬೈಗೆ, ಆರ್ ವಿನಯ್ ಕುಮಾರ್ ಕೊಲ್ಕತ್ತಾ ನೈಟ್ ರೈಡರ್ಸ್ನಿಂದ ಮುಂಬೈ ಇಂಡಿಯನ್ಸ್ಗೆ, ಪಾರ್ಥೀವ್ ಪಟೇವ್ ಆರ್ಸಿಬಿಯಿಂದ ಮುಂಬೈಗೆ, ಮುಂದೀಪ್ ಸಿಂಗ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದ ಆರ್ಸಿಬಿಗೆ ಬಂದಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಆರ್‍ಸಿಬಿ ಇಬ್ಬರು ಆಟಗಾರರನ್ನು ಕೈಬಿಟ್ಟು ಮೂವರು ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ.
ತಂಡಗಳ ಕಿಸೆಯಲ್ಲಿ ರು. 63 ಕೋಟಿ:ಕಳೆದ ಆವೃತ್ತಿಯಲ್ಲಿ ತಂಡಗಳ ಕಿಸೆಯಲ್ಲಿದ್ದ ಮೊತ್ತದಲ್ಲಿ ಶೇ. 5ರಷ್ಚು ಏರಿಕೆಯಾಗಿದ್ದು, ಪ್ರತಿ ತಂಡಕ್ಕೂ ರು. 63 ಕೋಟಿ
ಬಳಸಿಕೊಳ್ಳುವ ಅವಕಾಶವಿದೆ. ಆದರೆ ಈಗಾಗಲೇ ತಂಡದಲ್ಲಿರುವ ಆಟಗಾರರ ಒಟ್ಟು ಮೊತ್ತವನ್ನು ತೆಗೆದು ಹಾಕಿ ಉಳಿದ ಮೊತ್ತದಲ್ಲಿ ಆಟಗಾರರನ್ನು ಖರೀದಿಸಬೇಕಿದೆ.
ಸಿಎಸ್ಕೆ ರು, 4.80 ಕೋಟಿ, ಡೆಲ್ಲಿ ಡೇರ್ ಡೆವಿಲ್ಸ್ ತಂಡ ರು. 39.75 ಕೋಟಿ, ಕಿಂಗ್ಸ್ ಇಲೆವೆನ್ ಪಂಜಾಬ್ ರು. 12.60 ಕೋಟಿ, ಮುಂಬೈ ಇಂಡಿಯನ್ಸ್ ರು. 10 ಕೋಟಿ, ರಾಜಸ್ಥಾನ ರಾಯಲ್ಸ್ ರು. 12. 75 ಕೋಟಿ, ಆರ್ಸಿಬಿ ರು. 20. 80 ಮತ್ತು ಹೈದರಾಬಾದ್ ರು. 21.05 ಕೋಟಿ ಮೊತ್ತವನ್ನು ಹೊಂದಿದೆ.
ಹರಾಜಿನಲ್ಲಿ ಪ್ರಮುಖರು
ಯುವರಾಜ್ ಸಿಂಗ್, ದಿನೇಶ್
ಕಾರ್ತಿಕ್, ಆಯನ್
ಮೋರ್ಗನ್, ಎರಾನ್ ಪಿsಂಚ್,
ಕೇನ್ ವಿಲಿಯಮ್ಸನ್, ಮುರಳಿ
ವಿಜಯ್ , ಮಹೇಲ
ಜಯವರ್ದನೆ, ಕುಮಾರ
ಸಂಗಕ್ಕಾರ, ಕೆವಿನ್
ಪೀಟರ್ಸನ್, ಹಶೀಂ ಆಮ್ಲ ,
ಅಲೆಕ್ಸ್ ಹಾಲ್ಸ್, ಆ್ಯಂಜೆಲೊ
ಮ್ಯಾಥ್ಯೂಸ್ , ಡಾರೆನ್ ಸಾಮಿ.
ಹರಾಜು ಪ್ರಕ್ರಿಯೆ ನೇರ ಪ್ರಸಾರ
ಸೋನಿ ಸಿಕ್ಸ್, ಬೆಳಗ್ಗೆ 9.30ರಿಂದ ಆರಂಭ