ನೆಲ್ಸನ್: ಗುರುವಾರ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಜಿಂಬಾಬ್ವೆ, ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ (ಯುಎಇ)ವನ್ನು ಪರಾಭವಗೊಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಗೆಲವಿನ ಸವಿಯುಂಡಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಯುಎಇ ಪೂರ್ತಿ 50 ಓವರ್‌ಗಳನ್ನೂ ಸದ್ಬಳಕೆ ಮಾಡಿಕೊಂಡು 7ಕ್ಕೆ 285 ರನ್‌ಗಳನ್ನು ಕಲೆ ಹಾಕಿತು. ಇದು ಈ ತಂಡ ಏಕದಿನ ಪಂದ್ಯವೊಂದರಲ್ಲಿ ಗಳಿಸಿದ ಅತಿ ದೊಡ್ಡ ಮೊತ್ತವಾಗಿದೆ.
ಆದರೆ ಈ ಸವಾಲಿನ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ, ಸೀಯಾನ್ ವಿಲಿಯಮ್ಸ್ 65 ಎಸೆತಗಳಲ್ಲಿ ಬಾರಿಸಿದ ಅಜೇಯ 76 ರನ್‌ಗಳ ನೆರವಿನಿಂದ 48 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು.
ಯುಎಇ ಪರ ಅಮ್ಜದ್ ಅಲಿ 7, ಆಂಡ್ರೆ ಬೆರೆಂಗರ್ 22, ಕೃಷ್ಣ ಚಂದ್ರನ್ 34, ಖುರ್ರಂ ಖಾನ್ 45, ಸ್ವಪ್ನಿಲ್ ಪಾಟೀಲ್ 32, ಶೈಮನ್ ಅನ್ವರ್ 67 , ರೋಹನ್ ಮುಸ್ತಾಫ 4 ರನ್ ಸಂಪಾದಿಸಿದರೆ, ಮೊಹಮ್ಮದ್ ನವೇದ್ (23) ಹಾಗೂ ಅಮ್ಜದ್ ಜಾವೇದ್ (25) ಅಜೇಯರಾಗಿ ಉಳಿದರು.
ಜಿಂಬಾಬ್ವೆ ಪರ ಚಟಾರ ಮೂರು ವಿಕೆಟ್ ಕಬಳಿಸಿದರೆ, ಸೊಲೋಮನ್ ಮಿರೆ, ಸೀನ್ ವಿಲಿಯಮ್ಸ್ ತಲಾ ಎರಡು ವಿಕೆಟ್ ಉರುಳಿಸಿದರು.
ಬಳಿಕ ಬ್ಯಾಟಿಂಗ್‌ಗೆ ಇಳಿದ ಜಿಂಬಾಬ್ವೆ 48 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 286 ರನ್ ಬಾರಿಸಿ ಗೆಲವಿನ ದಾದಾ ಸೇರಿದರು. ತಂಡದ ಪರ ಚಕಾಬಾ 35, ಸಿಕಂದರ್ ರಾಜಾ 46 , ಹ್ಯಾಮಿಲ್ಟನ್ ಮಸಕಝ 1, ಬ್ರೆಂಡನ್ ಟಯ್ಲರ್ 47, ಕ್ರೆಗ್ ಇರ್ವಿನ್ 42 ರನ್ ಗಳಿಸಿದರೆ ಸಿಯಾನ್ ವಿಲಿಯಮ್ಸ್ (76) ಎಲ್ಟನ್ ಚಿಗುಂಬುರ (14) ಅಜೇಯವಾಗಿ ತಂಡವನ್ನು ಗುರಿ ಮುಟ್ಟಿಸಿದರು. ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸಿಯಾನ್ ವಿಲಿಯಮ್ಸ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.